Sunday, May 19, 2024
Homeಇತರಕರಾವಳಿ ಭಾಗಗಳಲ್ಲಿ ಸಮಗ್ರ ಅಭಿವೃದ್ಧಿಗಾಗಿ “ಡಾ| ವಿ.ಎಸ್‌. ಆಚಾರ್ಯ ಕರಾವಳಿ ಅಭಿವೃದ್ಧಿ ಅಧ್ಯಯನ ಕೇಂದ್ರ" ಸ್ಥಾಪಿಸಲು...

ಕರಾವಳಿ ಭಾಗಗಳಲ್ಲಿ ಸಮಗ್ರ ಅಭಿವೃದ್ಧಿಗಾಗಿ “ಡಾ| ವಿ.ಎಸ್‌. ಆಚಾರ್ಯ ಕರಾವಳಿ ಅಭಿವೃದ್ಧಿ ಅಧ್ಯಯನ ಕೇಂದ್ರ” ಸ್ಥಾಪಿಸಲು ಮಂಗಳೂರು ವಿ.ವಿ ಚಿಂತನೆ…!

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಹಿತ ಕರಾವಳಿಯ ಸಮಗ್ರ ಅಭಿವೃದ್ಧಿಗಾಗಿ “ಡಾ| ವಿ.ಎಸ್‌. ಆಚಾರ್ಯ ಕರಾವಳಿ ಅಭಿವೃದ್ಧಿ ಅಧ್ಯಯನ ಕೇಂದ್ರ’ವನ್ನು ಆರಂಭಿಸಲು ಮಂಗಳೂರು ವಿಶ್ವವಿದ್ಯಾನಿಲಯವು ಚಿಂತನೆ ನಡೆಸಿದೆ.

ಶಿಕ್ಷಣ, ಕೃಷಿ, ಬ್ಯಾಂಕಿಂಗ್‌, ಮೀನುಗಾರಿಕೆ, ಹೆಂಚು ಉದ್ಯಮ, ಸಣ್ಣ-ಮಧ್ಯಮ ಕೈಗಾರಿಕಾ ವಲಯ, ಬೀಡಿ ಉದ್ಯೋಗ ಸಹಿತ ಕರಾವಳಿಯ ಎಲ್ಲ ವಿಚಾರಗಳ ಆಮೂಲಾಗ್ರ ಅಧ್ಯಯನ ಈ ಕೇಂದ್ರದ ಆಶಯ. ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಅವರ ಮುತುವರ್ಜಿಯಲ್ಲಿ ಈ ಬಗ್ಗೆ ಪ್ರಸ್ತಾವನೆ ಸಿದ್ಧಗೊಳ್ಳುತ್ತಿದ್ದು, ಶೀಘ್ರ ಸರಕಾರದ ಒಪ್ಪಿಗೆ ಪಡೆಯುವ ನಿರೀಕ್ಷೆ ಇದೆ.

ಅಧ್ಯಯನ, ಸಂಶೋಧನೆ ಮತ್ತು ಪ್ರಕಟನೆ ಈ ಕೇಂದ್ರದ ಉದ್ದೇಶ. ಈ ಮೂಲಕ ಅಧ್ಯಯನ, ಸಂಶೋಧನೆ ಕೈಗೊಂಡು ಸರಕಾರ, ಖಾಸಗಿ ಸಂಸ್ಥೆ, ಸಾರ್ವಜನಿಕರ ಗಮನ ಸೆಳೆದು ಸ್ಪಂದಿಸುವಂತೆ ಮಾಡಲಿದೆ. ಕೇಂದ್ರಕ್ಕೆ 5 ಕೋ.ರೂ. ಅನುದಾನ ನಿರೀಕ್ಷೆಯನ್ನು ಮಂಗಳೂರು ವಿ.ವಿ. ಇರಿಸಿಕೊಂಡಿದೆ.

- Advertisement -
spot_img

Latest News

error: Content is protected !!