Sunday, June 7, 2026
Homeಕರಾವಳಿಸುಳ್ಯ: ಸೂಕ್ತ ವ್ಯವಸ್ಥೆ ಕಲ್ಪಿಸದೇ ಇದ್ದರೆ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ: ಶಾಸಕರ ಮುಂದೆ ಆಕ್ರೋಶ...

ಸುಳ್ಯ: ಸೂಕ್ತ ವ್ಯವಸ್ಥೆ ಕಲ್ಪಿಸದೇ ಇದ್ದರೆ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ: ಶಾಸಕರ ಮುಂದೆ ಆಕ್ರೋಶ ಹುರ ಹಾಕಿದ ನೆರೆ ಸಂತ್ರಸ್ಥರು

- Advertisement -
- Advertisement -

ಸುಳ್ಯ :ಜಲಸ್ಪೋಟದಿಂದಾಗಿ ಮನೆಗಳಿಗೆ ಹಾನಿಯಾಗಿ  ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಜನರು  ಸ್ಥಳಕ್ಕೆ ಆಗಮಿಸಿದ ಶಾಸಕ ಬೋಪಯ್ಯ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದರೆ ಪತ್ರ ಬರೆದಿಟ್ಟು  ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೊಯನಾಡಿನಲ್ಲಿ ಜಲಸ್ಫೋಟಗೊಂಡು ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರನ್ನು ಭೇಟಿಯಾಗಲು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರು ಆಗಮಿಸಿದ್ದರು.  ಈ ವೇಳೆ ಶಾಸಕರಲ್ಲಿ ನೋವು ತೋಡಿಕೊಂಡ ಸಂತ್ರಸ್ತರು, ಕಿಂಡಿ ಅಣೆಕಟ್ಟು ಮಾಡುವಾಗ ನಮ್ಮ ಅಭಿಪ್ರಾಯ ಕೇಳಿಲ್ಲ. ಈಗ ಸಮಸ್ಯೆ ಆಗಿರುವುದು ನಮಗೆ. ಇದೊಂದು ಪ್ರಕೃತಿ ವಿಕೋಪದಿಂದ ಆಗಿದ್ದರೆ ಯಾವುದೇ ಸಮಸ್ಯೆಯಿರಲಿಲ್ಲ. ಇದು ಮಾನವ ನಿರ್ಮಿತ ವಿಕೋಪವಾಗಿದೆ, ನಮ್ಮನ್ನು ನೀವೆಲ್ಲ ಸೇರಿ ನಿರಾಶ್ರಿತರಾಗಿ ಮಾಡಿದ್ದೀರಿ ಎಂದು ಅಳಲು ತೋಡಿಕೊಂಡಿದ್ದಾರೆ.

- Advertisement -

Latest News

error: Content is protected !!