Sunday, June 7, 2026
Homeತಾಜಾ ಸುದ್ದಿಅಸಮರ್ಪಕ ನೀರಿನ ಟ್ಯಾಂಕ್ ನಿರ್ವಹಣೆ-ಟ್ಯಾಂಕ್ ಗೆ ಬಿದ್ದು ಸಾವನ್ನಪ್ಪಿದ ಐದು ವರ್ಷದ ಮಗು!..

ಅಸಮರ್ಪಕ ನೀರಿನ ಟ್ಯಾಂಕ್ ನಿರ್ವಹಣೆ-ಟ್ಯಾಂಕ್ ಗೆ ಬಿದ್ದು ಸಾವನ್ನಪ್ಪಿದ ಐದು ವರ್ಷದ ಮಗು!..

- Advertisement -
- Advertisement -

ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಹೇಮರಡ್ಡಿ ಮಲ್ಲಮ್ಮ ಕಾಲೊನಿಯ ಭಾರತ್‌ ನಗರ ಪ್ಲಾಟ್‌ನ ಮಗುವೊಂದು ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿತ್ತು. ಈಗ ಐದು ವರ್ಷದ ಮಗು ಪಕ್ಕದ ಮನೆಯ ನೀರಿನ ಟ್ಯಾಂಕ್‌(ಸಂಪ್‌)ನಲ್ಲಿ ಶವವಾಗಿ ಪತ್ತೆಯಾಗಿದೆ.

ಮಗು ಸಂಜೆ ವೇಳೆ ಆಟ ಆಡುತ್ತಿದ್ದಾಗ ನಾಪತ್ತೆಯಾಗಿತ್ತು. ಒಂದು ದಿನ ಮಗಳಿಗಾಗಿ ಹೆತ್ತವರು ಸುತ್ತೆಲ್ಲ ಹುಡುಕಾಡಿದ್ದಾರೆ. ಪತ್ತೆಯಾಗದಿದ್ದಾಗ ಪೊಲೀಸ್‌ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು.ಆದರೆ ಮಗು ಪಕ್ಕದ ಮನೆಯ ನೀರಿನ ಟ್ಯಾಂಕ್‌(ಸಂಪ್‌)ನಲ್ಲಿ ಬಿದ್ದು ಸಾವನ್ನಪ್ಪಿದೆ. ಪೊಲೀಸರು ಪಕ್ಕದ ಮನೆಯವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ..

- Advertisement -

Latest News

error: Content is protected !!