Saturday, May 18, 2024
Homeಕರಾವಳಿಉಳ್ಳಾಲ: ರಸ್ತೆಯಲ್ಲಿ ಹರಿದ ಫಿಶ್‌ ಮೀಲ್‌ ತ್ಯಾಜ್ಯದ ನೀರು: ಟ್ಯಾಂಕರ್‌ ತಡೆದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

ಉಳ್ಳಾಲ: ರಸ್ತೆಯಲ್ಲಿ ಹರಿದ ಫಿಶ್‌ ಮೀಲ್‌ ತ್ಯಾಜ್ಯದ ನೀರು: ಟ್ಯಾಂಕರ್‌ ತಡೆದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

spot_img
- Advertisement -
- Advertisement -

ಉಳ್ಳಾಲ: ರಸ್ತೆಯುದ್ದಕ್ಕೂ ಟ್ಯಾಂಕರ್‌ನಿಂದ ಫಿಶ್‌ ಮೀಲ್‌ ತ್ಯಾಜ್ಯ ಹರಿದು ಸರಣಿ ಅಪಘಾತವಾದ ಕಾರಣ ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲದ ಕೋಟೆಪುರದ ಫ್ಯಾಕ್ಟರಿ ಕಡೆಗೆ ಬರ್ತಿದ್ದ ಟ್ಯಾಂಕರ್‌ನಿಂದ ತ್ಯಾಜ್ಯದ ನೀರು ರಸ್ತೆಯುದ್ದಕ್ಕೂ ಹರಿದಿದೆ. ಇದ್ರಿಂದ ಹಲವು ದ್ವಿಚಕ್ರ ವಾಹನಗಳು ಜಾರಿ ಬಿದ್ದು ಸವಾರರು ಗಾಯಗೊಂಡಿದ್ದಾರೆ. ಇದ್ರಿಂದ ಆಕ್ರೋಶ ಗೊಂಡ ಸ್ಥಳೀಯರು ತಕ್ಷಣ ಟ್ಯಾಂಕರ್‌ನ ನಿಲ್ಲಿಸಿ ಚಾಲಕನನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಫಿಶ್ ಮೀಲ್‌ ತ್ಯಾಜ್ಯಯುಕ್ತ ನೀರು ಟ್ಯಾಂಕರಿನಿಂದ ರಸ್ತೆಯುದ್ದಕ್ಕೂ ಹರಿದು, ಸ್ಥಳೀಯರು ಟ್ಯಾಂಕರ್ ಲಾರಿಯನ್ನು ತಡೆದು ಪ್ರತಿಭಟಿಸಿದ ಘಟನೆ ಉಳ್ಳಾಲದಲ್ಲಿ ಇಂದು ನಡೆದಿದೆ. ನಂತರ ಸ್ಥಳಕ್ಕೆ ಬಂದ ಉಳ್ಳಾಲ ನಗರ ಸಭೆ ಆಯುಕ್ತರು ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

- Advertisement -
spot_img

Latest News

error: Content is protected !!