Thursday, May 23, 2024
Homeಕರಾವಳಿಮಂಗಳೂರು: ಈ ವರ್ಷ ಭರ್ಜರಿ ಮೀನುಗಾರಿಕೆ; ಮೀನುಗಾರರ ಮುಖದಲ್ಲಿ ಮಂದಹಾಸ!

ಮಂಗಳೂರು: ಈ ವರ್ಷ ಭರ್ಜರಿ ಮೀನುಗಾರಿಕೆ; ಮೀನುಗಾರರ ಮುಖದಲ್ಲಿ ಮಂದಹಾಸ!

spot_img
- Advertisement -
- Advertisement -

ಮಂಗಳೂರು: ಕಳೆದ ವರ್ಷ ನಾನಾ ಕಾರಣಗಳಿಂದ ಮೀನುಗಾರಿಕೆ ಉದ್ಯಮ ಸಂಕಷ್ಟಗೊಳಗಾಗಿದ್ದು, ಇದೀಗ ಟ್ರಾಲ್‌ಬೋಟ್‌ನವರಿಗೆ ರಾಣಿ ಫಿಶ್‌ ಸೇರಿದಂತೆ ಕಪ್ಪೆ ಬೊಂಡಾಸ್‌‌, ಕೋಲು ಮೀನು ಮುಂತಾದ ಮೀನುಗಳು ಹೇರಳವಾಗಿ ಲಭಿಸಿವೆ. ಅಲ್ಲದೆ ಪರ್ಶಿಯನ್‌ ಬೋಟ್‌‌ಗಳಿಗೂ ಕೂಡಾ ಉತ್ತಮ ಮೀನುಗಳು ದೊರೆತಿದ್ದು, ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿದೆ.

ಡೀಸೆಲ್‌ ಸಮಸ್ಯೆ ಬಗೆಹರಿದ ಬಳಿಕ ಶೇ.90ರಷ್ಟು ಬೋಟ್‌‌ಗಳು ಮೀನುಗಾರಿಕೆ ಚಟುವಟಿಕೆ ಆರಂಭಿಸಿದ್ದು, ಎರಡು ವರ್ಷಗಳಿಂದ ಮೀನುಗಾರರು ಸಂಕಷ್ಟದಲ್ಲಿದ್ದರು. ವಿದೇಶಗಳಿಗೆ ರಫ್ತು ಮಾಡುವ ಉದ್ದೇಶದಿಂದ ಕೊಚ್ಚಿ ಸೇರಿದಂತೆ ಗೋವಾ ಹಾಗೂ ಗುಜರಾತ್‌‌ ರಾಜ್ಯಗಳಿಗೆ ಮೀನು ಸಾಗಾಟವಾಗುತ್ತಿದೆ.

ಆಗಸ್ಟ್‌‌ 1ರಂದು ಶುರುವಾಗಬೇಕಿದ್ದ ಮೀನುಗಾರಿಕೆ ಋತು ,ಡೀಸೆಲ್‌‌‌‌‌‌‌ ಸಬ್ಸಿಡಿ ಪಾಸ್‌ಬುಕ್‌‌ ಸಿಗುವಾಗ ವಿಳಂಬವಾಗಿದ್ದ ಕಾರಣ, ಹೆಚ್ಚಿನ ಬೋಟ್‌ಗಳು ಆಗಸ್ಟ್‌ 15ರ ಬಳಿಕ ಮೀನುಗಾರಿಕೆಯಲ್ಲಿ ತೊಡಗಿವೆ.

ಸದ್ಯ ಸಮುದ್ರ ಶಾಂತವಾಗಿರುವುದರಿಂದ ಆಳ ಸಮುದ್ರದಲ್ಲಿ ಉತ್ತಮ ರೀತಿಯಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಇದರೊಂದಿಗೆ ಮಂಜುಗಡ್ಡೆ ಅಂಗಡಿ, ಹೊಟೇಲ್‌‌‌, ಫಿಶ್‌ ಕಟ್ಟಿಂಗ್‌, ಟ್ರಾನ್ಸ್‌‌ಪೋರ್ಟ್‌ ಹಾಗೂ ಎಲ್ಲಾ ಉದ್ಯಮಗಳು ನಡೆಯುತ್ತಿವೆ. ಕಾರ್ಮಿಕರಿಗೂ ಕೂಡಾ ಉತ್ತಮ ಸಂಬಳ ಸಿಗುತ್ತಿದ್ದು, ಟೆಂಪೋ, ಬೈಕ್‌ಗಳಲ್ಲಿ ಮನೆ ಮನೆಗೆ ಕೊಂಡೊಯ್ದು ಮೀನು ಮಾರುವವರಿಗೆ ಹಾಗೂ ಮಾರುಕಟ್ಟೆಗಳಲ್ಲಿ ಮೀನು ಮಾರುವ ಮಹಿಳೆಯರಿಗೆ ಉತ್ತಮ ರೀತಿಯಲ್ಲಿ ವ್ಯಾಪಾರವಾಗುತ್ತಿದೆ.

- Advertisement -
spot_img

Latest News

error: Content is protected !!