Saturday, May 4, 2024
Homeಕರಾವಳಿಉಡುಪಿಪಡುಬಿದ್ರಿಯ ಕಾಮಿನಿ ನದಿಯಲ್ಲಿ ಮೀನುಗಳ ಮಾರಣ ಹೋಮ : ಮೀನು ಸಾಕಾಣಿಕೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟ

ಪಡುಬಿದ್ರಿಯ ಕಾಮಿನಿ ನದಿಯಲ್ಲಿ ಮೀನುಗಳ ಮಾರಣ ಹೋಮ : ಮೀನು ಸಾಕಾಣಿಕೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟ

spot_img
- Advertisement -
- Advertisement -

ಉಡುಪಿ: ಇಲ್ಲಿನ ಪಡುಬಿದ್ರಿಯ ಕಾಮಿನಿ ನದಿಯಲ್ಲಿ ಮೀನುಗಳ ಮಾರಣ ಹೋಮವಾಗಿದೆ. ನೀರು ಕಲುಷಿತಗೊಂಡ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಮೀನುಗಳು ಸಾವನ್ನಪ್ಪಿದ್ದು, ಮೀನು ಸಾಕಾಣಿಕಾರರಿಗೆ ಬರ ಸಿಡಿಲು ಬಡಿದಿದೆ. ಎರಡು ದಿನಗಳ ಹಿಂದೆ ಬಂದ ಮಳೆಯ ಬಳಿಕ ಹೊಳೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿ ಕಲುಷಿತಗೊಂಡಿತ್ತು.

ಬಳಿಕ ಪಂಜರದಲ್ಲಿ ಸಾಕುವ ಮೀನುಗಳು ಹಾಗೂ ಹೊಳೆಯಲ್ಲಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಮೀನುಗಳು ಸತ್ತು ಹೋಗಲು ಆರಂಭವಾಗಿದೆ. ಇದರಿಂದ ಸುತ್ತಮುತ್ತಲು ದುರ್ವಾಸನೆಯಿಂದ ಕೂಡಿದೆ. ಅಲ್ಲದೆ ಹೊಳೆಯ ನೀರು ಕೃಷಿ ಭೂಮಿಗೂ ಆವರಿಸಿರುವುದರಿಂದ ಕೃಷಿ ಭೂಮಿಗೂ ಹಾನಿಯಾಗಿದೆ. ಈ ಭಾಗದಲ್ಲಿ ಇರುವ ಹೆಚ್ಚುತ್ತಿರುವ ಕೈಗಾರಿಕೆ ಗಳಿಂದಾಗಿ ಅಲ್ಲಿ ಹೊರಬಿಡುವ ರಾಸಾಯನಿಕ ಮಿಶ್ರಿತ ನೀರಿನಿಂದ ಮೀನುಗಳು ಸತ್ತುಹೋಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇನ್ನು ಮೀನು ಸಾಕಾಣಿಕೆದಾರರಲ್ಲಿ ಒಬ್ಬರಾದ ಸ್ನೇಹಿತ್ ಎಂಬವರು ಮಾತನಾಡಿ ನಾನು ಮತ್ತು ನಿತಿನ್ ಅವರ ಎರಡು ತಂಡವಾಗಿ 15 ಮಂದಿ ಕಾಡಿಪಟ್ಣ ಹಾಗೂ ನಡಿಪಟ್ಣದ ಜಾರಂದಾಯ ಸಾನದ ಬಳಿ ಪಂಜರದಲ್ಲಿ ಮೀನು ಸಾಕಾಣಿಕೆ ಆರಂಭಿಸಿದ್ದೆವು. ಪಂಜರಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿದ್ದು, ವಿದೇಶಗಳಿಗೆ ರಫ್ತು ಮಾಡಲಾಗುವ ಮುಡಾವು, ಕ್ಯಾವೇಜ್ ಮೀನುಗಳು ಸಾಕುತ್ತಿದ್ದೆವು. ಈ ಎರಡು ದಿನಗಳ ಹಿಂದೆ ಸುಮಾರು 9 ಟನ್ ಮೀನುಗಳು ಸತ್ತುಹೋಗಿವೆ. ಅಲ್ಲದೆ ಹೊಳೆಯಲ್ಲಿರುವ ಪಯ್ಯಾ, ಕಾನೆ, ಕ್ಯಾವೇಜ್, ಮಾಲ, ಇರ್ಪೆ, ತೆಬೇರಿ ಮೀನುಗಳು ಸತ್ತು ಹೋಗಿವೆ.

ಇದರಿಂದ ನಮಗೆ 22ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದಿದ್ದಾರೆ. ಅಲ್ಲದೇ ಇಲಾಖೆ ಈ ನಿಟ್ಟಿನಲ್ಲಿ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಇದರ ಜೊತೆಗೆ ಕಲುಷಿತ ನೀರಿನಿಂದಾಗಿ ಕೃಷಿ ಭೂಮಿಗೂ ಹಾನಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

- Advertisement -
spot_img

Latest News

error: Content is protected !!