Saturday, June 6, 2026
Homeಕರಾವಳಿಉಳ್ಳಾಲ: ಸಿಡಿಲು ಬಡಿದು ಮೀನುಗಾರನ ಸಾವು

ಉಳ್ಳಾಲ: ಸಿಡಿಲು ಬಡಿದು ಮೀನುಗಾರನ ಸಾವು

- Advertisement -
- Advertisement -

ಉಳ್ಳಾಲ: ಸಿಡಿಲು ಬಡಿದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಸಮುದ್ರ ತೀರದಲ್ಲಿ ಶನಿವಾರ ನಡೆದಿದೆ.


ಮೃತ ಮೀನುಗಾರನನ್ನು ಬೆಂಗ್ರೆ ನಿವಾಸಿ ಹೈದರಾಲಿ ಎಂದು ಗುರುತಿಸಲಾಗಿದೆ.


ಹೈದರಾಲಿ ಸೇರಿದಂತೆ ಆರು ಮಂದಿ ಶನಿವಾರ ಮುಂಜಾನೆ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಇದರಿಂದ ಹೈದರಾಲಿ ಗಾಯಗೊಂಡು ಮೃತಪಟ್ಟಿದ್ದು, ಉಳಿದವರಿಗೆ ಗಾಯಗಳಾಗಿವೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!