Saturday, June 6, 2026
Homeಕರಾವಳಿಉಡುಪಿಉಡುಪಿ: ಅಕ್ರಮದ ನೆಪವೊಡ್ಡಿ ಮೀನು ಮಾರಾಟ ಶೆಡ್‌ ನೆಲಸಮ: ಬಡ ಮೀನುಗಾರ ಮಹಿಳೆಯರ ಮೇಲೆ ನಗರಸಭೆ...

ಉಡುಪಿ: ಅಕ್ರಮದ ನೆಪವೊಡ್ಡಿ ಮೀನು ಮಾರಾಟ ಶೆಡ್‌ ನೆಲಸಮ: ಬಡ ಮೀನುಗಾರ ಮಹಿಳೆಯರ ಮೇಲೆ ನಗರಸಭೆ ಗದಾ ಪ್ರಹಾರ

- Advertisement -
- Advertisement -

ಉಡುಪಿ: ಅಕ್ರಮದ ನೆಪದಲ್ಲಿ ಉಡುಪಿ ನಗರಸಭೆ ನಿನ್ನೆ ನಿರ್ಮಾಣ ಹಂತದಲ್ಲಿದ್ದ ಬಡ ಮೀನುಗಾರರ ಶೆಡ್‌ ನ ನೆಲಸಮ ಮಾಡಿದೆ. ನಗರದ ಕಿನ್ನಿಮೋಳಿ ಸ್ವಾಗತ ಗೋಪುರ ಬಳಿ ಮೀನುಗಾರ ಮಹಿಳೆಯರ ಸುರಕ್ಷತೆಗಾಗಿ ನಿರ್ಮಾಣಗೊಳ್ಳುತ್ತಿದ್ದ ಈ ಶೆಡ್‌ನ ಕೆಡವಿ ಹಾಕಿದೆ.

ಕಳೆದ ಸುಮಾರು ವರ್ಷಗಳಿಂದ ಇಲ್ಲಿ ಮೀನು ಮಾರಾಟ ಮಾಡಿ ಮಹಿಳೆಯರು ಜೀವನ ಸಾಗಿಸ್ತಿದ್ರು. ಇವರ ತಲೆಯ ಮೇಲೊಂದು ಸೂರಿಗಾಗಿ  ಸ್ಥಳೀಯ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ತಮ್ಮ ಸ್ವಂತ ಖರ್ಚಿನಲ್ಲಿ ಶೆಡ್‌ ನಿರ್ಮಾಣಕ್ಕೆ ಮುಂದಾಗಿದ್ರು.

ಶೆಡ್‌ ನಿರ್ಮಾಣದ ಖುಷಿಯಲ್ಲಿದ್ದ ಮಹಿಳೆಯರಿಗೆ ನಗರಸಭೆ ಶಾಕ್‌ ಕೊಟ್ಟಿದೆ. ಏಕಾಏಕಿ ಅಕ್ರಮ ನಿರ್ಮಾಣದ ನೆಪ ಮುಂದಿಟ್ಟು ಮೀನು ಮಾರುಕಟ್ಟೆಯನ್ನು ನಗರಸಭೆ ನೆಲಸಮ ಮಾಡಿದ್ದು, ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.

- Advertisement -

Latest News

error: Content is protected !!