Thursday, June 4, 2026
Homeಕರಾವಳಿಬೆಳ್ತಂಗಡಿ; ಅಗ್ನಿಶಾಮಕ ದಳದಿಂದ ಗುಂಡಿಗೆ ಬಿದ್ದಿದ್ದ ದನದ ರಕ್ಷಣೆ

ಬೆಳ್ತಂಗಡಿ; ಅಗ್ನಿಶಾಮಕ ದಳದಿಂದ ಗುಂಡಿಗೆ ಬಿದ್ದಿದ್ದ ದನದ ರಕ್ಷಣೆ

- Advertisement -
- Advertisement -

ಬೆಳ್ತಂಗಡಿ : ಗುಂಡಿಗೆ ಬಿದ್ದ ದನವನ್ನು ಅಗ್ನಿಶಾಮಕದಳದವರು ರಕ್ಷಣೆ‌ ಮಾಡಿದ ಘಟನೆ ಬೆಳ್ತಂಗಡಿಯ ಓಡಿಲ್ನಾಳದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಒಡಿಲ್ನಾಳ ಗ್ರಾಮದ ಇಡ್ಯಾ ಲಕ್ಷ್ಮಿ ನಿವಾಸ ರವಿ ಎಂಬವರ ಗುಡ್ಡಕ್ಕೆ ಬಿಟ್ಟಿದ್ದ ಎಂಟು ತಿಂಗಳ ಗಬ್ಬದ ದನ ನಿನ್ನೆ ಸಂಜೆ ವೇಳೆ ಮನೆಯ ಪಕ್ಕದಲ್ಲಿರುವ 20 ಅಡಿ ಆಳದ ಗುಂಡಿಗೆ ಬಿದ್ದಿತ್ತು.

ತಕ್ಷಣ ಜೆಸಿಬಿ ಮುಖಾಂತರ ಗುಂಡಿಯನ್ನು ಮೇಲಕ್ಕೆ ಬರುವಂತೆ ದಾರಿ ಮಾಡಿ  ನಂತರ ಬೆಳ್ತಂಗಡಿ  ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಗಿತ್ತು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ  ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ದನವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿಯಾದ ನೀಲಯ್ಯಗೌಡ, ಚಾಲಕ ಲಿಂಗರಾಜ್ ಲಮಾನಿ, ಚಾಲಕ&ತಂತ್ರಜ್ಞ ಮೋಹನ್ ಗೌಡ,ವಿಜಯ್ ಕುಮಾರ್,ಬಾಬು,ರಾಜೇಶ್,ಮಹಮ್ಮದ್ ಜಂಬಗಿ,ರಂಗನಾಥ್,ವಿನೋದ್ ರಾಜ್,ಮಂಗಳದಾಸ್ ಕಾರ್ಯಾಚಾರಣೆಯಲ್ಲಿ ಪಾಲ್ಗೊಂಡಿದ್ದರು.

- Advertisement -

Latest News

error: Content is protected !!