Thursday, June 4, 2026
Homeಕರಾವಳಿಬೆಳ್ತಂಗಡಿ : ದನದ ಹಟ್ಟಿಗೆ ಆಕಸ್ಮಿಕ ಬೆಂಕಿ: ಅಗ್ನಿಶಾಮಕದಳದ ಕಾರ್ಯಾಚರಣೆಯಿಂದ ಐದು  ಜಾನುವಾರುಗಳ ರಕ್ಷಣೆ.

ಬೆಳ್ತಂಗಡಿ : ದನದ ಹಟ್ಟಿಗೆ ಆಕಸ್ಮಿಕ ಬೆಂಕಿ: ಅಗ್ನಿಶಾಮಕದಳದ ಕಾರ್ಯಾಚರಣೆಯಿಂದ ಐದು  ಜಾನುವಾರುಗಳ ರಕ್ಷಣೆ.

- Advertisement -
- Advertisement -

ಬೆಳ್ತಂಗಡಿ : ದನದ ಹಟ್ಟಿಗೆ ಆಕಸ್ಮಿಕ ಬೆಂಕಿ ತಗುಲಿದ್ದು ತಕ್ಷಣ ಬೆಳ್ತಂಗಡಿ ಅಗ್ನಿಶಾಮಕದಳ ದೌಡಾಯಿಸಿ ಬೆಂಕಿ ನಂದಿಸಿ ಐದು ಜಾನುವಾರುಗಳನ್ನು ರಕ್ಷಣೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಮಾಧವ ಎಂಬವರ ಮನೆಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಇಂದು ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಈ ಘಟನೆ ನಡೆದಿದೆ.ಹಟ್ಟಿಯಲ್ಲಿ ಐದು ಜಾನುವಾರಗಳಿದ್ದು ಆಕಸ್ಮಿಕ ಬೆಂಕಿ ಹಟ್ಟಿಗೆ ಬಿದ್ದು ಹೊತ್ತಿಕೊಂಡಿದೆ ತಕ್ಷಣ ಬೆಳ್ತಂಗಡಿ ಅಗ್ನಿಶಾಮಕ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ನೀರು ಹಾಯಿಸಿ ದೂಡ್ಡ ಅನಾಹುತವನ್ನು ತಪ್ಪಿಸಿ ಜಾನುವಾರುಗಳನ್ನು ರಕ್ಷಣೆ‌ ಮಾಡಿದ್ದಾರೆ. ಬೆಂಕಿ ಹೊತ್ತಿಕೊಂಡ ರಭಸಕ್ಕೆ ದನದ ಹಟ್ಟಿಗೆ ಹಾನಿಯಾಗಿದೆ.

ಬೆಳ್ತಂಗಡಿ ಅಗ್ನಿಶಾಮಕದಳದ ಪ್ರಮುಖ ಅಗ್ನಿಶಾಮಕ ಪಿ.ಕೃಷ್ಣನಾಯ್ಕ, ಚಾಲಕ&ತಂತ್ರಜ್ಞ ಮೋಹನ್ ಗೌಡ, ಅಗ್ನಿಶಾಮಕರಾದ ಮಹಮ್ಮದ್ ಜಂಬಗಿ, ವಿನೋದ್ ರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -

Latest News

error: Content is protected !!