Thursday, June 4, 2026
Homeಉತ್ತರ ಕನ್ನಡಆಕಸ್ಮಿಕವಾಗಿ ಅಡಿಕೆ ತೋಟಕ್ಕೆ ಬೆಂಕಿ: ಸಂಪೂರ್ಣ ಸುಟ್ಟುಕರಕಲಾದ ಸುಮಾರು 2 ಎಕರೆ ಅಡಿಕೆ ತೋಟ

ಆಕಸ್ಮಿಕವಾಗಿ ಅಡಿಕೆ ತೋಟಕ್ಕೆ ಬೆಂಕಿ: ಸಂಪೂರ್ಣ ಸುಟ್ಟುಕರಕಲಾದ ಸುಮಾರು 2 ಎಕರೆ ಅಡಿಕೆ ತೋಟ

- Advertisement -
- Advertisement -

ಉತ್ತರ ಕನ್ನಡ: ಆಕಸ್ಮಿಕವಾಗಿ ಅಡಿಕೆ ತೋಟಕ್ಕೆ ಬೆಂಕಿ ಬಿದ್ದು ಸುಮಾರು 2 ಎಕರೆ ಅಡಿಕೆ ತೋಟ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿ ಬನವಾಸಿಯ ಭಾಸಿ ಗ್ರಾಮದಲ್ಲಿ ನಡೆದಿದೆ.
ಮೃತ್ಯುಂಜಯ ಎಂಬ ರೈತನಿಗೆ ಸೇರಿದ ಅಡಿಕೆ ತೋಟ ಸಂಪೂರ್ಣ ಸುಟ್ಟ ಕರಕಲಾಗಿದೆ. ಸುಮಾರು 2000 ಕ್ಕೂ ಅಧಿಕ ಅಡಿಕೆ ಗಿಡಗಳು ಬೆಂಕಿಗಾಹುತಿಯಾಗಿದೆ. ಅಲ್ಲದೇ ಒಂದೂವರೆ ಲಕ್ಷ ಮೌಲ್ಯದ ಪೈಪ್ ಲೈನ್ ಕೂಡ ಸಂಪೂರ್ಣ ಸುಟ್ಟು ಹೋಗಿದೆ. ಸಾಲ ಮಾಡಿ ಅಡಿಕೆ ತೋಟ ಮಾಡಿದ್ದರು ರೈತ ಮೃತ್ಯುಂಜಯ. ಆದರೆ ಇದೀಗ ಎಲ್ಲವೂ ಬೆಂಕಿಗೆ ಆಹುತಿಯಾಗಿದ್ದು, ಸೂಕ್ತ ಪರಿಹಾರಕ್ಕಾಗಿ ರೈತ ಅಂಗಲಾಚುತ್ತಿದ್ದಾರೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!