Tuesday, June 30, 2026
Homeಕರಾವಳಿಉಡುಪಿಕೋಟ : ಪಟಾಕಿ ಕಿಡಿ ತಗುಲಿ ರಾಸಾಯನಿಕ ಸ್ಫೋಟ ; ದಂಪತಿಗೆ ಗಾಯ

ಕೋಟ : ಪಟಾಕಿ ಕಿಡಿ ತಗುಲಿ ರಾಸಾಯನಿಕ ಸ್ಫೋಟ ; ದಂಪತಿಗೆ ಗಾಯ

- Advertisement -
- Advertisement -

ಕೋಟ : ಮನೆಯಲ್ಲಿ ಇರಿಸಿದ್ದ ಕಲ್ಲುಕೊರೆಗೆ ಬಳಸುವ ರಾಸಾಯನಿಕ ವಸ್ತುಗೆ ಪಟಾಕಿ ಕಿಡಿ ತಗುಲಿದ ಪರಿಣಾಮ ಸಿಡಿದು ದಂಪತಿ ಗಾಯಗೊಂಡಿರುವ ಘಟನೆ ಶಿರಿಯಾದ ಗ್ರಾಮದ ಪಡುಮುಂಡು ಎಂಬಲ್ಲಿ ಶನಿವಾರ ನಡೆದಿದೆ.

ಪಡುಮುಂಡು ನಿವಾಸಿ ದಿನೇಶ್ ಶೆಟ್ಟಿ(50) ಹಾಗೂ ಅವರ ಪತ್ನಿ ವಸಂತಿ ಶೆಟ್ಟಿ ಗಾಯಗೊಂಡವರೆಂದು ಗುರುತಿಸಲಾಗಿದೆ. ದಿನೇಶ್ ಶೆಟ್ಟಿ ತೀವ್ರವಾಗಿ ಗಾಯಗೊಂಡಿದ್ದು,ಸದ್ಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಟಾಕಿ ಸಿಡಿಸುವ ವೇಳೆ ಅದರ ಕಿಡಿ ಹಾರಿ ಕಾರಿನ ಶೆಡ್‌ನಲ್ಲಿ ಇರಿಸಿದ್ದ ಕಲ್ಲುಕೋರೆಗೆ ಬಳಸುವ ರಾಸಾಯಿನಿಕ ವಸ್ತುವಿಗೆ ತಗಲಿತ್ತೆನ್ನಲಾಗಿದೆ. ಇದರಿಂದ ರಾಸಾಯಿನಿಕ ಸ್ಪೋಟಗೊಂಡ ಪರಿಣಾಮ ದಿನೇಶ್ ಶೆಟ್ಟಿ ದಂಪತಿ ಗಾಯಗೊಂಡರು. ಅಲ್ಲದೆ ಶೆಡ್‌ನಲ್ಲಿ ಇರಿಸಿದ್ದ ಕಾರಿನ ಮುಂಭಾಗ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

- Advertisement -

Latest News

error: Content is protected !!