Friday, June 5, 2026
Homeತಾಜಾ ಸುದ್ದಿಗುಜರಾತ್‌: ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿದುರಂತ, 5 ಮಂದಿ ಸಜೀವ ದಹನ

ಗುಜರಾತ್‌: ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿದುರಂತ, 5 ಮಂದಿ ಸಜೀವ ದಹನ

- Advertisement -
- Advertisement -

ಅಹಮಾದಾಬಾದ್: ಗುಜರಾತ್‌ನ ದಹೇಜ್‌ನಲ್ಲಿರುವ ರಾಸಾಯನಿಕ ಕಾರ್ಖಾನೆಯೊಂದು ಹೊತ್ತಿ ಉರಿದು ಐವರು ಮೃತಪಟ್ಟಿದ್ದು, 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದಿದ್ದವು. ಕಾರ್ಖಾನೆಯ ಹತ್ತಿರದಲ್ಲಿದ್ದ ಜನರು ಸುರಕ್ಷಿತವಾಗಿದ್ದಾರೆ.ಕಾರ್ಖಾನೆಯಲ್ಲಿ ಉಂಟಾದ ಬೆಂಕಿಯಿಂದಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು.

ಸುಮಾರು 35ರಿಂದ 40 ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದು ಅವರನ್ನು ಭಾರುಚ್ ಆಸ್ಪತ್ರೆಗೆ ಸೇರಿಸಲಾಗಿದೆ. ಬೆಂಕಿಯ ಜ್ವಾಲೆ ಇಡಿ ಕಾರ್ಖಾನೆಯನ್ನೇ ಆವರಿಸಿಕೊಂಡಿದ್ದು ಎರಡು ಹಳ್ಳಿಯ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ .

- Advertisement -

Latest News

error: Content is protected !!