Friday, January 27, 2023
Homeಕರಾವಳಿಮಂಗಳೂರಿನಲ್ಲಿ ಯುವತಿಯ ಮತಾಂತರ ಆರೋಪ ಹಿನ್ನೆಲೆ: ವೈದ್ಯೆ ಹಾಗೂ ಇಬ್ಬರು ಯುವಕರ ವಿರುದ್ಧ ಎಫ್ ಐಆರ್

ಮಂಗಳೂರಿನಲ್ಲಿ ಯುವತಿಯ ಮತಾಂತರ ಆರೋಪ ಹಿನ್ನೆಲೆ: ವೈದ್ಯೆ ಹಾಗೂ ಇಬ್ಬರು ಯುವಕರ ವಿರುದ್ಧ ಎಫ್ ಐಆರ್

- Advertisement -
- Advertisement -

ಮಂಗಳೂರು: ಹಿಂದೂ ಧರ್ಮದ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ ಆರೋಪ ಮಂಗಳೂರಿನಲ್ಲಿ ಕೇಳಿ ಬಂದಿದ್ದು, ವೈದ್ಯೆ ಹಾಗೂ ಮುಸ್ಲಿಂ ಯುವಕರ ವಿರುದ್ದ ಪ್ರಕರಣ ದಾಖಲಾಗಿದೆ.

ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮತಾಂತರ ನಡೆಸಿ ಹೆಸರು ಬದಲಿಸಿದ ಬಗ್ಗೆ ದೂರು ನೀಡಲಾಗಿದೆ.

ಇಸ್ಲಾಂಗೆ ಮತಾಂತರ ಮಾಡಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಯುವತಿಯಿಂದ ದೂರು ನೀಡಲ್ಪಟ್ಟಿದ್ದು, ಕುಲಶೇಖರದ ಮೊಬೈಲ್ ಅಂಗಡಿಯ ಖಲೀಲ್ ಹಾಗೂ ಭದ್ರಾವತಿಯ ಇಮಾಮ್ ಎಂಬ ಯುವಕರು ಹಾಗೂ ಮಂಗಳೂರಿನ ಪ್ರಸೂತಿ ತಜ್ಞೆ ಡಾ. ಜಮೀಲಾ ವಿರುದ್ದ ಮತಾಂತರ ಆರೋಪ ಕೇಳಿಬಂದಿದೆ.

ಯುವತಿಗೆ ಖಲೀಲ್ ಪರಿಚಯವಾಗಿ ಆತನ ಸಂಬಂಧಿಕರ ಮನೆಯಲ್ಲಿ ಕೆಲಸ‌ ಮಾಡುತ್ತಿದ್ದ ವೇಳೆ ಇಸ್ಲಾಮ್ ಗೆ ಮತಾಂತರ ಮಾಡಿ ಕುರಾನ್ ಓದಿಸಿ ನಮಾಜ್ ಗೆ ಒತ್ತಡ ಹಾಕಿರುವ ಆರೋಪ ವ್ಯಕ್ತವಾಗಿದೆ. ಡಾ. ಜಮೀಲಾ ಅವರ ಮನೆಯಲ್ಲಿ ಖಲೀಲ್ ಯುವತಿಯನ್ನು ಕೆಲಸಕ್ಕೆ ಸೇರಿಸಿದ್ದು ಅಲ್ಲೂ ದೌರ್ಜನ್ಯ ಮಾಡಿರುವ ಆರೋಪ ಮಾಡಲಾಗಿದೆ.

ವಿಶ್ವ ಹಿಂದೂ ಪರಿಷತ್ ಸಂಘಟನೆ ಮೂಲಕ ಯುವತಿ ಪೊಲೀಸ್ ದೂರು ನೀಡಿದ್ದು ಮತಾಂತರ ನಿಷೇಧ ಕಾಯ್ದೆಯಡಿ ಎಫ್ ಐಆರ್ ದಾಖಲಾಗಿದೆ.

- Advertisement -
spot_img

Latest News

error: Content is protected !!