Tuesday, May 7, 2024
Homeಕರಾವಳಿಅಪ್ರಾಪ್ತೆಗೆ ಥಳಿತ ಆರೋಪ: ಬಜ್ಪೆ ಠಾಣೆ ಮಹಿಳಾ ಪೇದೆ ವಿರುದ್ಧ ಎಫ್ಐಆರ್ ದಾಖಲು

ಅಪ್ರಾಪ್ತೆಗೆ ಥಳಿತ ಆರೋಪ: ಬಜ್ಪೆ ಠಾಣೆ ಮಹಿಳಾ ಪೇದೆ ವಿರುದ್ಧ ಎಫ್ಐಆರ್ ದಾಖಲು

spot_img
- Advertisement -
- Advertisement -

ಮಂಗಳೂರು: ಮಹಿಳಾ ಸಿಬ್ಬಂದಿಯೊಬ್ಬರು ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆಗೆ ಥಳಿಸಿರುವ ಆರೋಪ ಮಂಗಳೂರಿನ ಬಜ್ಪೆ ಠಾಣೆಯಲ್ಲಿ ಕೇಳಿಬಂದಿದೆ. ಅಪ್ರಾಪ್ತೆಯ ಪೋಷಕರು ಬಜ್ಪೆ ಠಾಣೆಯ ಸಿಬ್ಬಂದಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೂಡಬಿದ್ರೆಯ ಯುವಕನೊಬ್ಬ ತನ್ನನ್ನು ಲವ್ ಮಾಡುವಂತೆ ಅಪ್ರಾಪ್ತೆಗೆ ಒತ್ತಾಯ ಮಾಡುತ್ತಿದ್ದನಂತೆ. ಆಕೆಗೆ ಕರೆ ಮಾಡಿ ಒತ್ತಾಯ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಯುವತಿ ದೂರು ನೀಡಲು ತನ್ನ ಪೋಷಕರ ಜೊತೆ ಬಜ್ಪೆ ಪೊಲೀಸ್ ಠಾಣೆಗೆ ಹೋಗಿದ್ದರಂತೆ. ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು 16 ವರ್ಷದ ಅಪ್ರಾಪ್ತೆಗೆ ಲಾಠಿಯಿಂದ ಹೊಡೆದರು ಎಂಬ ಆರೋಪ ಕೇಳಿಬಂದಿದೆ.

ಸದ್ಯ, ಸಿಬ್ಬಂದಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಜೊತೆಗೆ, CWC ತಂಡದವರು ಬಾಲಕಿಯಿಂದ ಹೇಳಿಕೆ ಸಹ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!