Sunday, August 30, 2026
Homeತಾಜಾ ಸುದ್ದಿಮತ್ತೊಂದು ಸಾಂಕ್ರಾಮಿಕ ರೋಗಕ್ಕೆ ಸಿದ್ಧರಾಗಿ ಎಂದ ವಿಶ್ವ ಆರೋಗ್ಯ ಸಂಸ್ಥೆ!..-ಜಗತ್ತಿಗೆ ನೀಡಿದ ಎಚ್ಚರಿಕೆಯ ಹಿಂದಿನ...

ಮತ್ತೊಂದು ಸಾಂಕ್ರಾಮಿಕ ರೋಗಕ್ಕೆ ಸಿದ್ಧರಾಗಿ ಎಂದ ವಿಶ್ವ ಆರೋಗ್ಯ ಸಂಸ್ಥೆ!..-ಜಗತ್ತಿಗೆ ನೀಡಿದ ಎಚ್ಚರಿಕೆಯ ಹಿಂದಿನ ಗುಟ್ಟೇನು?

- Advertisement -
- Advertisement -

ವಾಷಿಂಗ್ಟನ್: ಕೊರೊನಾ ಸೋಂಕಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನು ರವಾನಿಸಿದೆ. ಇದೆ ವೇಳೆ ಕೊರೊನಾ ಸೋಂಕು ಎಂಬುದು ವಿಶ್ವದ ಸ್ವರೂಪವನ್ನೇ ಈ ಆರೆಂಟು ತಿಂಗಳಲ್ಲಿ ಬದಲಾಯಿಸಿದ್ದು ಈಗ ಮತ್ತೊಂದು ಸಾಂಕ್ರಾಮಿಕಕ್ಕೆ ಸಿದ್ಧರಾಗಿ ಎಂದು ಜಗತ್ತಿಗೆ ಎಚ್ಚರಿಕೆ ನೀಡಿದೆ.

ಕೊವಿಡ್ 19 ರೋಗದಿಂದ ಸಾವು ನೋವಿನ ಜೊತೆಗೆ ವಿಶ್ವಾದ್ಯಂತ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಮಧ್ಯೆ ಆರೋಗ್ಯ ಸಂಸ್ಥೆ ಮತ್ತೊಂದು ಮಹಾಮಾರಿಯ ಸುಳಿವು ನೀಡಿರುವುದು ಅಚ್ಚರಿ ಎನಿಸಿದೆ. ಮುಂದಿನ ಸಾಂಕ್ರಾಮಿಕ ರೋಗಕ್ಕೆ ತಯಾರಿ ನಡೆಸುವಂತೆ ವಿಶ್ವದ ನಾಯಕರುಗಳನ್ನು ಕೋರಿದೆ. ಮುಂದಿನ ಸಾಂಕ್ರಾಮಿಕ ರೋಗಕ್ಕೆ ನಾವು ಈಗಿನಿಂದಲೇ ತಯಾರಿ ನಡೆಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಇದೇವೇಳೆ ಕೊರೊನಾ ವೈರಸ್ ಹರಡುವಿಕೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ದೇಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.

- Advertisement -

Latest News

error: Content is protected !!