Thursday, May 2, 2024
Homeಕರಾವಳಿಬೆಳ್ತಂಗಡಿ ಮೂಲದ ಎನ್ವಿ ಗ್ರೀನ್ ಬಯೋಟೆಕ್ ಕಂಪನಿ ಮಾಲೀಕ ಅಶ್ವಥ್ ಹೆಗ್ಡೆ ವಿರುದ್ಧ ಎಫ್ ಐ...

ಬೆಳ್ತಂಗಡಿ ಮೂಲದ ಎನ್ವಿ ಗ್ರೀನ್ ಬಯೋಟೆಕ್ ಕಂಪನಿ ಮಾಲೀಕ ಅಶ್ವಥ್ ಹೆಗ್ಡೆ ವಿರುದ್ಧ ಎಫ್ ಐ ಆರ್ ದಾಖಲು

spot_img
- Advertisement -
- Advertisement -

ಬೆಳ್ತಂಗಡಿ ಮೂಲದ ಎನ್ವಿ ಗ್ರೀನ್ ಬಯೋಟೆಕ್ ಕಂಪನಿ ಮಾಲೀಕ ಅಶ್ವಥ್ ಹೆಗ್ಡೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.ಅಶ್ವಥ್ ಹೆಗ್ಡೆ ಸೇರಿ ಮೂವರ ಮೇಲೆ FIR ದಾಖಲಾಗಿದ್ದು, ಕೈ ಚೀಲ ತಯಾರಿಸೊ ಯಂತ್ರ ಕೊಡೋದಾಗಿ ಕರ್ನಾಟಕ ಸೇರಿ ಹಲವು ರಾಜ್ಯದ ಜನರಿಗೆ ಮೋಸ‌ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಆಂಧ್ರದ ಉದ್ಯಮಿ ಪ್ರಣಯ್ ಕುಮಾರ್ ಎಂಬವರಿಂದ 1 ಕೋಟಿ 26 ಲಕ್ಷ ಹಣ ಪಡೆದು, ನಕಲಿ ಯಂತ್ರ ಕೊಟ್ಟು ಕೋಟಿ ಕೋಟಿ ವಂಚನೆ ಮಾಡಿರುವ ಆರೋಪ ಅಶ್ವಥ್ ಹೆಗ್ಡೆ ವಿರುದ್ಧ ಕೇಳಿಬಂದಿದೆ. ಅಶ್ವಥ್ ಹೆಗ್ಡೆ ಪ್ಲಾಸ್ಟಿಕ್ ಕವರ್ ತಯಾರಾಗೊ ಯಂತ್ರ ಕೊಟ್ಟು‌ ಆಂಧ್ರದ ಉದ್ಯಮಿ ಪ್ರಣಯ್ ಕುಮಾರ್ ಗೆ ಯಾಮಾರಿಸಿದ್ದು, ಸೋಶಿಯಲ್ ‌ಮೀಡಿಯಾದಲ್ಲಿ ಪಬ್ಲಿಸಿಟಿ‌ ಮಾಡಿ ಹಲವರಿಗೆ ಮೋಸ ಮಾಡಿದ್ದಾರೆ ಎನ್ನಲಾಗಿದೆ.

ಸದ್ಯ ಅಶ್ವಥ್ ಹೆಗ್ಡೆ ಸೇರಿ ಡೈರೆಕ್ಟರ್ ‌ಗಳಾದ ಅಕ್ಷತಾ‌ ಹೆಗ್ಡೆ, ರಾಘವೇಂದ್ರ ನಾಯಕ್ ಮೇಲೆ FIR ದಾಖಲಾಗಿದೆ. ಆಂದ್ರ ಮೂಲದ ಪ್ರಣಯ್ ಕುಮಾರ್ ಅಶೋಕ್‌ ನಗರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಈ ಹಿಂದೆಯೂ ಉದ್ಯಮಿಯೊಬ್ಬರಿಗೆ ಮೋಸ ಮಾಡಿದ ಅಶ್ವಥ್ ಹೆಗ್ಡೆ : ಉದ್ಯಮಿ ನೀಲಿಮಾ ಎಂಬುವರು ಅಶ್ವತ್ಥ್ ಹೆಗ್ಡೆ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದೂರು ದಾಖಲಿಸಿದ್ದರು. ಅಶ್ವತ್ಥ್ ಹೆಗ್ಡೆ ಪ್ಲಾಸ್ಟಿಕ್ ಬದಲು ಆರ್ಗ್ಯಾನಿಕ್​ ಚೀಲ ಕಂಡು ಹಿಡಿದಿದ್ದಾಗಿ ನೀಲಿಮಾ ಅವರಿಗೆ ನಂಬಿಸಿದ್ದರು. ಇದು ಬಿಸಿ ನೀರಿನಲ್ಲೂ ಕರಗುತ್ತದೆ ಎಂದು ಹೇಳಿದ್ದರು. 1.26 ಕೋಟಿ ರೂಪಾಯಿ ಮೌಲ್ಯದ ಯಂತ್ರ ಹಾಗೂ ಕಾರ್ಮಿಕರನ್ನು ನೀಡುವುದಾಗಿ ಹೇಳಿ ಮೋಸ ಮಾಡಿದ್ದರು ಎಂದು ನೀಲಿಮಾ ದೂರಿನಲ್ಲಿ ತಿಳಿಸಿದ್ದರು.

ಮೊದಲ ಹಂತವಾಗಿ 7.4 ಕೋಟಿ ರೂಪಾಯಿ ಹಣ ಪಡೆದು, ನಂತರ 5 ಲಕ್ಷ ರುಪಾಯಿ ಮೌಲ್ಯದ ಯಂತ್ರ ಕೊಟ್ಟು ಅಶ್ವತ್ಥ್ ಮೋಸ ಮಾಡಿದ್ದರು. ಇನ್ನು ಆರ್ಗ್ಯಾನಿಕ್ ಬ್ಯಾಗ್ ತಯಾರಿಕೆಗೆ ಕಚ್ಚಾ ವಸ್ತು ನೀಡಲಿಲ್ಲ. ಇನ್ನು ಅನುಭವವಿಲ್ಲದ ಕಾರ್ಮಿಕರನ್ನು ನೀಡಿದ್ದರು ಎಂದು ನೀಲಿಮಾ ಆರೋಪಿಸಿದ್ದರು. ನೀಲಿಮಾ ನೀಡಿದ ದೂರಿನ ಆಧಾರದ ಮೇಲೆ ಅಶ್ವತ್ಥ್ ಹೆಗ್ಡೆ ವಿರುದ್ಧ ಅಶೋಕನಗರ ಪೊಲೀಸರು ಐಪಿಸಿ ಸೆಕ್ಷನ್ 406, 420 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

- Advertisement -
spot_img

Latest News

error: Content is protected !!