Thursday, June 25, 2026
Homeಕರಾವಳಿಬೆಳ್ತಂಗಡಿ : ತಡರಾತ್ರಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿದ್ದವರಿಗೆ ಬಿತ್ತು ದಂಡ

ಬೆಳ್ತಂಗಡಿ : ತಡರಾತ್ರಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿದ್ದವರಿಗೆ ಬಿತ್ತು ದಂಡ

- Advertisement -
- Advertisement -

ಬೆಳ್ತಂಗಡಿ :ಕಳಿಯ ಗ್ರಾಮ ಪಂಚಾಯತ್ ನ ಗೇರುಕಟ್ಟೆ ಪೇಟೆಯ ರಸ್ತೆ ಬದಿಯ ಎಲ್ಲೆಂದರಲ್ಲಿ ರಾತ್ರಿ ತ್ಯಾಜ್ಯ ತಂದು ಹಾಕುತ್ತಿದ್ದರು.ಗ್ರಾಮಸ್ಥರಿಗೆ ಇದರಿಂದ ತುಂಬಾ ತೊಂದರೆ ಆಗುತ್ತಿದ್ದು,ಪಂಚಾಯತ್ ನ ವಾರ್ಡ್ ಸಭೆ ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇತ್ತೀಚಿನ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡು ಹಾಕಿದ ತ್ಯಾಜ್ಯವನ್ನು ಸ್ವಚ್ಛಗೊಳಿಸಿ 2 ದಿನಗಳಿಗೆ ಮೊದಲು ಸಿ.ಸಿ.ಟಿ.ವಿ ಅಳವಡಿಸಿ ದಂಡ ಹಾಕುವ ಫಲಕ ಹಾಕಿದ್ದರು.

ಆ.8 ರಂದು ತಡರಾತ್ರಿ ಬೇರೆ ಗ್ರಾಮದ ಹೋಟೆಲ್ ಒಂದರಿಂದ ತಾಜ್ಯ ತಂದು ಬಿಸಾಡಲು ಬಂದಾಗ ತಡರಾತ್ರಿ ಪಿಡಿಓ ಸಿಸಿಟಿವಿ ನೋಡುತ್ತಿದ್ದರು ಅದಾಗಲೇ ನಾಳಕ್ಕೆ ರಸ್ತೆಯಾಗಿ ಹೋಗುತ್ತಿದ್ದ ಪಂ ಮಾಜಿ ಅಧ್ಯಕ್ಷ ಕೇಶವ ಪೂಜಾರಿ ನೋಡಿ ತ್ಯಾಜ್ಯ ಹಾಕುತ್ತಿದ್ದವನನ್ನು ದ್ವಿಚಕ್ರ ವಾಹನ ಸಮೇತ ಹಿಡಿದಿಟ್ಟು ಸದಸ್ಯರ ಗಮನಕ್ಕೆ ತಂದರು.ತಡರಾತ್ರಿ ತಕ್ಷಣ ಪಿಡಿಓ,ಪಂಚಾಯತ್ ಸದಸ್ಯರಾದ ಲತೀಪ್ ಪರಿಮರವರು ಇನ್ನೋರ್ವ ಸದಸ್ಯರಾದ ಅಬ್ದುಲ್ ಕರೀಮ್ ಗೆ ಮಾಹಿತಿ ನೀಡಿ ಸ್ಥಳೀಯರ ಸಹಕಾರದಿಂದ ಹಾಗೂ ಮಾಜಿ ಪಂ ಅಧ್ಯಕ್ಷರು ಹಿಡಿದು ನಿಲ್ಲಿಸಿ ತಾಜ್ಯ ಬಿಸಾಡಲು ಬಂದವರಿಗೆ ಸ್ಥಳದಲ್ಲಿಯೇ ಮೂರು ಸಾವಿರ ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು.

- Advertisement -

Latest News

error: Content is protected !!