- Advertisement -
- Advertisement -
ಕಾಸರಗೋಡು: ವಾಟ್ಸಾಪ್ ಮೂಲಕ ಪತ್ನಿಗೆ ಡಿವೋರ್ಸ್ ನೀಡಿದ ಪತಿಯ ವಿರುದ್ಧ ದೂರು ದಾಖಲಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ನೆಲ್ಲಿಕಟ್ಟೆ ನಿವಾಸಿ ಅಬ್ದುಲ್ ರಝಾಕ್ ವಿರುದ್ಧ ದೂರು ದಾಖಲಾಗಿದೆ.
ಅಬ್ದುಲ್ ರಝಾಕ್ ಕಲ್ಲುರಾವಿ ನಿವಾಸಿ ಯುವತಿಯನ್ನು 2022ರಲ್ಲಿ ವಿವಾಹವಾಗಿದ್ದ. ಆ ಬಳಿಕ 12 ಲಕ್ಷ ರೂ. ನಗದನ್ನು ಅಬ್ದುಲ್ ರಝಾಕ್ ಪಡೆದುಕೊಂಡಿರುವುದಾಗಿ ಯುವತಿಯ ತಂದೆ ಆರೋಪಿಸಿದ್ದಾರೆ. ಹೊಸದುರ್ಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿಯ ತಂದೆಯ ಫೋನ್‌ಗೆ ಕೊಲ್ಲಿಯಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ರಝಾಕ್ ತಲಾಖ್ ಹೇಳುವ ಸಂದೇಶ ಕಳುಹಿಸಿಕೊಟ್ಟಿದ್ದನು. ಫೆ. 21ರಂದು ಈ ಘಟನೆ ನಡೆದಿತ್ತು. ಪತಿಯ ಸಂಬಂಧಿಕರು ನಿರಂತರವಾಗಿ ಕಿರುಕುಳ ನೀಡುತ್ತಿದ್ದುದಾಗಿ ಯುವತಿ ದೂರಿದ್ದಾಳೆ. ಪತಿಯ ತಾಯಿ, ಇಬ್ಬರು ಸಹೋದರಿಯರು ಕಳೆದ ಎರಡೂವರೆ ವರ್ಷಗಳಿಂದ ಆಹಾರ ಕೂಡ ನೀಡದೆ ಕೊಠಡಿಯಲ್ಲಿ ಕೂಡಿ ಹಾಕಿ ದೌರ್ಜನ್ಯಗೈದಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.
- Advertisement -