Wednesday, June 3, 2026
Homeಕರಾವಳಿವಿಟ್ಲ: ಜಾಗದ ವಿಚಾರದಲ್ಲಿ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ

ವಿಟ್ಲ: ಜಾಗದ ವಿಚಾರದಲ್ಲಿ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ

- Advertisement -
- Advertisement -

ವಿಟ್ಲ: ಜಾಗದ ವಿಚಾರದಲ್ಲಿ ವ್ಯಕ್ತಿಗೆ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವಿಟ್ಲ ಚಂದಳಿಕೆ ಸಮೀಪದ ಕುರುಂಬಲ ಎಂಬಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ವಿಟ್ಲ ಚಂದಳಿಕೆ ಸಮೀಪದ ಕುರುಂಬಲ ನಿವಾಸಿ ಲೋಕನಾಥ್ ಜೋಗಿ ಮತ್ತು ಅವರ ಮಗ ಹೃದಯ್ ಜೋಗಿ ಎಂದು ಗುರುತಿಸಲಾಗಿದೆ.

ಜಾಗದ ವಿಷಯವಾಗಿ ಜಗಳ ನಡೆದಿದ್ದು, ಈ ಹಿನ್ನೆಲೆ ಮನೆಗೆ ಅಕ್ರಮ ಪ್ರವೇಶ ಮಾಡಿದ ಪುನೀತ್ ಜೋಗಿ ಮತ್ತು ತ್ಯಾಗರಾಜ್ ಎಂಬವರು ಲೋಕನಾಥ್ ಜೋಗಿ ಮತ್ತು ಅವರ ಮಗ ಹೃದಯ್ ಜೋಗಿ ರವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದು, ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ

- Advertisement -

Latest News

error: Content is protected !!