Thursday, June 4, 2026
Homeಕರಾವಳಿಮಂಗಳೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಬೊಕ್ಕೆ ನೀಡಲು ಕಾಂಗ್ರೆಸ್ ನ ಮಹಿಳಾ ಮುಖಂಡರುಗಳ ಮಧ್ಯೆ...

ಮಂಗಳೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಬೊಕ್ಕೆ ನೀಡಲು ಕಾಂಗ್ರೆಸ್ ನ ಮಹಿಳಾ ಮುಖಂಡರುಗಳ ಮಧ್ಯೆ ಜಟಾಪಟಿ

- Advertisement -
- Advertisement -

ಮಂಗಳೂರು; ಸಿಎಂ ಆದ ಬಳಿಕ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಇಂದು ಮಂಗಳೂರಿಗೆ ಆಗಮಿಸಿದ್ದರು.ಹೀಗಾಗಿ ಸಿಎಂಗೆ ಬೊಕ್ಕೆ ನೀಡಲು ಕಾಂಗ್ರೆಸ್ ನ ಮಹಿಳಾ ಮುಖಂಡರುಗಳ ಮಧ್ಯೆ ವಿಮಾನ ನಿಲ್ದಾಣದಲ್ಲಿ ಜಟಾಪಟಿ ನಡೆಯಿತು. ಪರಸ್ಪರ ಕಿತ್ತಾಡಿಕೊಂಡಿದ್ದಾರೆ ಮಹಿಳಾ ನಾಯಕಿಯರು.


ವಿಮಾನ ನಿಲ್ದಾಣದಿಂದ ಬಂದು ಕಾರಿನಲ್ಲಿ ಕೂತಿದ್ದ ಸಿಎಂ ಗೆ ಸ್ವಾಗತ ಕೋರಲು ಹೂಗುಚ್ಛ ಹಿಡಿದುಕೊಂಡ ಬಂದಿದ್ದ ಮಹಿಳಾ ಮುಖಂಡರು ತೆರಳಿದ್ದಾರೆ. ಕಾರ್ ನಲ್ಲಿ ಕೂತಿದ್ದ ಸಿಎಂ ಗೆ ಕಾಂಗ್ರೆಸ್ ಮುಖಂಡೆ ಶಾಲೆಟ್ ಪಿಂಟೋ ಬೊಕ್ಕೆ ಕೊಡಲು ಹೋಗಿದ್ದಾರೆ. ಆದರೆ ಈ ವೇಳೆ ಮಾಜಿ ಮೇಯರ್ ಕವಿತಾ ಸನಿಲ್ ಅಡ್ಡ ಬಂದಿದ್ದಾರೆ. ಈ ವೇಳೆ ಕವಿತಾ ಸನಿಲ್ ರನ್ನು ಶಾಲೆಟ್ ಪಿಂಟೋ ತಳ್ಳಿ ಪರಸ್ಪರ ಬೈದಾಡಿಕೊಂಡಿದ್ದಾರೆ. ಈ ಮಹಿಳಾ ಮುಖಂಡ ಜಗಳ ನೋಡಿ ಆಶ್ಚರ್ಯಗೊಂಡ ಸಿಎಂ, ಜಗಳ ನೋಡುತ್ತಾ ತೆರಳಿದ್ದಾರೆ.

- Advertisement -

Latest News

error: Content is protected !!