Thursday, June 4, 2026
Homeತಾಜಾ ಸುದ್ದಿಪುತ್ತೂರು: ವಿಹೆಚ್ ಪಿ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರ ಹಾಗೂ...

ಪುತ್ತೂರು: ವಿಹೆಚ್ ಪಿ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರ ಹಾಗೂ ವಿಹೆಚ್ ಪಿ ಕಾರ್ಯಕರ್ತರ ನಡುವೆ ಜಟಾಪಟಿ

- Advertisement -
- Advertisement -

ಪುತ್ತೂರು: ವಿಶ್ವ ಹಿಂದೂ ಪರಿಷತ್ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರ ಹಾಗೂ ವಿಹೆಚ್ ಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ವಿಶ್ವ ಹಿಂದೂ ಪರಿಷತ್  ನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಆಗಮಿಸಿದ್ದರು. ಇದರಿಂದ ವಿಎಚ್ ಪಿ ಕಾರ್ಯಕರ್ತರು ಕೋಪಗೊಂಡಿದ್ದಾರೆ. ಕಾರ್ಯಕ್ರಮ ನಡೆಯುತ್ತಿರುವಾಗ್ಲೇ ಪುತ್ತಿಲ ಪರಿವಾರ ಹಾಗೂ ವಿಎಚ್ ಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.


ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೊಡ್ಡಿ ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಪುತ್ತೂರಿನಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅರುಣ್ ಕುಮಾರ್ ಪುತ್ತಿಲ ಆಂಡ್ ಟೀಂ ಹಿಂದೂ ಸಂಘಟನೆಗಳಿಗೆ ಹಾಗೂ ಸಂಘ ಪರಿವಾರಕ್ಕೆ ನಿಂದಿಸಿದ್ದರು ಎಂಬ ಆರೋಪ ಇತ್ತು, ಹಾಗಾಗಿ ಪುತ್ತಿಲ ಆಂಡ್ ಟೀಂ ಯವುದೇ ಕಾರಣಕ್ಕೂ ನಮ್ಮ ವಿಎಚ್ ಪಿ ಕಾರ್ಯಕ್ರಮಕ್ಕೆ ಬರಬಾರದು ಸಂಘಟಕರು ಹೇಳಿದ್ದರು.


ಇದಾದ ಬಳಿಕ ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬಿಕ್ಕಟ್ಟು ಶಮನಗೊಂಡು ಪುತ್ತಿಲ ಬಿಜೆಪಿ ಸೇರ್ಪಡೆಗೊಂಡಿದ್ದರು, ಆದರೆ ಆದ್ರೆ ವಿಎಚ್ ಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಸಮರ ಹಾಗೆಯೇ ಉಳಿದಿತ್ತು. ಮತ್ತೆ ಇಂದು ವಿಎಚ್ ಪಿ ನೂತನ ಕಾರ್ಯಾಲಯದ ಕಾರ್ಯಕ್ರಮದಲ್ಲಿ ಅದು ಸ್ಫೋಟಗೊಂಡಿದೆ.

- Advertisement -

Latest News

error: Content is protected !!