Thursday, June 4, 2026
Homeಕರಾವಳಿಮಂಗಳೂರುಕಡಬ: ಹಸಿಮೀನು ಮಾರುಕಟ್ಟೆಯಲ್ಲಿ ಹಸಿ ಮೀನು ದರ ವಿಚಾರಕ್ಕೆ ಎರಡ ಅಂಗಡಿಯವರ ಮಧ್ಯೆ ಹೊಡೆದಾಟ  

ಕಡಬ: ಹಸಿಮೀನು ಮಾರುಕಟ್ಟೆಯಲ್ಲಿ ಹಸಿ ಮೀನು ದರ ವಿಚಾರಕ್ಕೆ ಎರಡ ಅಂಗಡಿಯವರ ಮಧ್ಯೆ ಹೊಡೆದಾಟ  

- Advertisement -
- Advertisement -

ಕಡಬ: ಹಸಿಮೀನು ಮಾರುಕಟ್ಟೆಯಲ್ಲಿ ಹಸಿ ಮೀನು ದರ ವಿಚಾರಕ್ಕೆ ಎರಡು ಅಂಗಡಿಯವರ ಮಧ್ಯೆ ಹೊಡೆದಾಟ ನಡೆದಿರುವ ಘಟನೆ ಕಡಬ  ಸಂತೆಕಟ್ಟೆ ಬಳಿ ನಡೆದಿದೆ.ಈ  ಬಗ್ಗೆ ಐವರ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.1 ರಂದು ಮುಂಜಾನೆ   ಇತ್ತಂಡಗಳು ಹೊಡೆದಾಟ ಮಾಡಿಕೊಳ್ಳುತ್ತಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.  ಕಡಬ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಅಭಿನಂದನ ಎಮ್ ಎಸ್ ರವರು  ವಿಡಿಯೋವನ್ನು ಪರಿಶೀಲಿಸಿದಾಗ  ಮೀನು ಮಾರಾಟದ ವಿಚಾರಕ್ಕೆ ರಾಜು ಮ್ಯಾಥ್ಯೂ ಹಾಗೂ ಆದಂ ಎಂಬವರ ಎರಡು ಅಂಗಡಿಯವರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ನಡೆದಿರುವುದು ಗೊತ್ತಾಗಿದೆ.

ರಾಜು ಮ್ಯಾಥ್ಯೂ, ಆದಂ ,ಫಯಾಜ್ ,ರಕ್ಷಿತ್ ಮಾಣಿ, ನೌಫಾಲ್ ಎಂಬುವರುಗಳು ಪರಸ್ಪರ ಹೊಡೆದಾಟ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವಂತೆ  ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿಭಂಗ ಉಂಟಾಗುವಂತೆ ಮಾಡಿದ  ವ್ಯಕ್ತಿಗಳ ವಿರುದ್ದ ಕಡಬ ಪೊಲೀಸ್‌‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!