Saturday, June 13, 2026
Homeಕರಾವಳಿಉಡುಪಿಕಾರ್ಕಳ; ಹುಣಸೆ ಹುಳಿ ಹೆಕ್ಕುತ್ತಿದ್ದಾಗ ಕುಸಿದು ಬಿದ್ದು ವ್ಯಕ್ತಿ ಸಾವು

ಕಾರ್ಕಳ; ಹುಣಸೆ ಹುಳಿ ಹೆಕ್ಕುತ್ತಿದ್ದಾಗ ಕುಸಿದು ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಕಾರ್ಕಳ: ಮರದಿಂದ ಬಿದ್ದ ಹುಣಸೆ ಹುಳಿಯನ್ನು ಹೆಕ್ಕುತ್ತಿದ್ದಾಗ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಗ್ಗೆ ಬೆಳಂಜೆ ಗ್ರಾಮದ ಹಣೆಗೋಡು ಎಂಬಲ್ಲಿ ನಡೆದಿದೆ. ಕೃಷ್ಣ ನಾಯ್ಕ್(40) ಮೃತ ದುರ್ದೈವಿ.

ಮನೆಯ ಜಾಗದಲ್ಲಿರುವ ಹುಣಸೆ ಹುಳಿ ಮರದ ಕೆಳಗೆ ಬಿದ್ದ ಕಾಯಿ ಹೆಕ್ಕುತ್ತಿದ್ದಾಗ ಅವವರು, ಕುಸಿದು ಬಿದ್ದರೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಅವರು ಹೆಬ್ರಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!