Saturday, June 6, 2026
Homeಕರಾವಳಿಉಡುಪಿಉಡುಪಿ ಜಿಲ್ಲಾಡಳಿತದಿಂದ ವೇಯ್ಟ್ ಲಿಫ್ಟರ್ ಗುರುರಾಜ ಪೂಜಾರಿಗೆ ಸನ್ಮಾನ

ಉಡುಪಿ ಜಿಲ್ಲಾಡಳಿತದಿಂದ ವೇಯ್ಟ್ ಲಿಫ್ಟರ್ ಗುರುರಾಜ ಪೂಜಾರಿಗೆ ಸನ್ಮಾನ

- Advertisement -
- Advertisement -

ಉಡುಪಿ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ವೇಯ್ಟ್ ಲಿಫ್ಟರ್ ಗುರುರಾಜ ಪೂಜಾರಿಗೆ ಉಡುಪಿಯಲ್ಲಿ ಆದರದ ಸ್ವಾಗತ ನೀಡಲಾಗಿದೆ.ಉಡುಪಿ ಜಿಲ್ಲೆ ಬೈಂದೂರಿನ ಗುರುರಾಜ್ ಪೂಜಾರಿ, 61 ಕೆಜಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಪದಕ ಪಡೆದ ಬಳಿಕ ಮೊದಲ ಬಾರಿಗೆ ತವರಿಗೆ ಆಗಮಿಸಿದ ಗುರುರಾಜ್ ಪೂಜಾರಿಗೆ, ಅಜ್ಜರಕಾಡು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಸನ್ಮಾನ ಮಾಡಲಾಗಿದ್ದು, ಜಿಲ್ಲಾಧಿಕಾರಿ ಕೂರ್ಮಾ ರಾವ್ ಸನ್ಮಾನಿಸಿದರು.ಈ ವೇಳೆ ಗುರುರಾಜ್ ಪೂಜಾರಿ ತಂದೆ ಮಹಾಬಲ ಪೂಜಾರಿ, ಪತ್ನಿ ಸೌಜನ್ಯ ಉಪಸ್ಥಿತರಿದ್ದರು.ಇದೇ ವೇಳೆ ಕಟಪಾಡಿಯ ಯುವ ವಾಹಿನಿ ಘಟಕದಿಂದಲೂ ಸನ್ಮಾನ ಮಾಡಲಾಯಿತು

- Advertisement -

Latest News

error: Content is protected !!