Thursday, April 25, 2024
Homeಕರಾವಳಿಕಾಸರಗೋಡುಕೇರಳದಲ್ಲಿ ಮಕ್ಕಳಿಗಾಗಿ ಜೀಪ್ ತಯಾರಿಸಿದ ಅಪ್ಪ: ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ಈ...

ಕೇರಳದಲ್ಲಿ ಮಕ್ಕಳಿಗಾಗಿ ಜೀಪ್ ತಯಾರಿಸಿದ ಅಪ್ಪ: ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ಈ ಸ್ಪೆಷಲ್ ವಾಹನ

spot_img
- Advertisement -
- Advertisement -

ಕೇರಳ: ಅಪ್ಪ ಅನ್ನೋ ಸಾಹುಕಾರ ಮಕ್ಕಳ ಪಾಲಿಗೆ ಕೇಳಿದ್ದನ್ನೆಲ್ಲಾ ಕೊಡೋ ಸಾಹುಕಾರ. ಮಕ್ಕಳಿಗಾಗಿ ಅಪ್ಪ ಮಾಡೋ ತ್ಯಾಗ ಒಂದೆರಡಲ್ಲ. ತನ್ನ ಬದುಕಿನ ಖುಷಿಯನ್ನೆಲ್ಲಾ ಅವರಿಗಾಗಿಯೇ ಧಾರೆ ಎರೆಯುತ್ತಾನೆ. ಅದೇ ರೀತಿ ಕೇರಳದಲ್ಲಿ ತಂದೆಯೊಬ್ಬರು ಮಕ್ಕಳಿಗಾಗಿ ಏನ್ ಮಾಡಿದ್ದಾರೆ ಗೊತ್ತಾ?

ಯೆಸ್… ಕೇರಳದಲ್ಲಿ ತಂದೆಯೊಬ್ಬರು ತನ್ನ ಪ್ರೀತಿಯ ಮಕ್ಕಳಿಗಾಗಿ ಜೀಪ್‌ ಮಾದರಿಯಲ್ಲಿ ಆಟಿಕೆ ತಯಾರಿಸಿದ್ದಾರೆ. ಕೇರಳದ ಮಲಪ್ಪುರಂ ಜಿಲ್ಲೆಯ ಅರಿಕೋಡೆಯ ಶಕೀರ್‌ ಎಂಬವರು ತನ್ನ ಮಕ್ಕಳಿಗೆ ಮಹೀಂದ್ರಾ ಜೀಪ್‌ ಮಾದರಿಯಲ್ಲಿ ಆಟಿಕೆ ವಾಹನ ನಿರ್ಮಿಸಿದ್ದಾರೆ. ಅದು ಈಗ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆದಿದೆ.

1 ಸಾವಿರ ವ್ಯಾಟ್‌ನ ಮೋಟರ್‌ ಅನ್ನು ಜೀಪ್‌ ಪ್ರತಿಕೃತಿಗೆ ಅಳವಡಿಸಿದ್ದಾರೆ. ಅದರಲ್ಲಿ ಪವರ್‌ ಸ್ಟಿಯರಿಂಗ್‌, ಒಂಬತ್ತು ಮ್ಯಾನ್ಯುವಲ್‌ ಗಿಯರ್‌ ಬಾಕ್ಸ್‌, ತೆಗೆದು ಮರು ಜೋಡಿಸಬಲ್ಲ ಹೆಡ್‌ಲೈಟ್‌ಗಳು ಇವೆ. ಮಕ್ಕಳಾದರೆ ಒಟ್ಟು ಎಂಟು ಮಂದಿ ಕೂರಲು ಸಾಧ್ಯವಾಗುತ್ತದೆ. ಐದರಿಂದ ಆರು ವರ್ಷಗಳ ಹಿಂದೆ 1.5 ಲಕ್ಷ ರೂ. ವೆಚ್ಚದಲ್ಲಿ ಅದನ್ನು ಸಿದ್ಧಪಡಿಸಿದ್ದಾರೆ. ಅದು 60-70 ಕಿಮೀ ದೂರದ ವರೆಗೆ ಸಂಚರಿಸುವ ಸಾಮರ್ಥ್ಯ ಅದಕ್ಕಿದೆಯಂತೆ.

ಇದೀಗ ಅಪ್ಪ ಮಕ್ಕಳಿಗೆ ತಯಾರಿಸಿದ ಜೀಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜೀಪ್ ಜೊತೆ ಅದನ್ನು ತಯಾರಿಸಿದ ಅಪ್ಪ ಕಾಳಜಿಗೂ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!