Sunday, June 7, 2026
Homeಅಪರಾಧದುಡ್ಡು ಬೇಕೆಂದು ಪೀಡಿಸಿದಕ್ಕೆ ಮಗನನ್ನೇ ಕೊಂದ ತಂದೆ; ಸರಳಿನಿಂದ ತಲೆಗೆ ಹೊಡೆದು ಕೊಲೆ

ದುಡ್ಡು ಬೇಕೆಂದು ಪೀಡಿಸಿದಕ್ಕೆ ಮಗನನ್ನೇ ಕೊಂದ ತಂದೆ; ಸರಳಿನಿಂದ ತಲೆಗೆ ಹೊಡೆದು ಕೊಲೆ

- Advertisement -
- Advertisement -

ಬೆಂಗಳೂರು: ದುಡ್ಡು ಕೊಡು ಎಂದು ಸದಾ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿರುವ ಪ್ರಕರಣವೊಂದು ಬೆಂಗಳೂರಿನ ಆರ್.ಟಿ. ನಗರದಲ್ಲಿ ನಡೆದಿದೆ.

ಕೊಲೆಗೀಡಾದ ಯುವಕನು ಆರ್.ಟಿ.ನಗರದ ಚಾಮುಂಡಿನಗರದ ನಿವಾಸಿ ಸುಲೇಮಾನ್ (18)ಆಗಿದ್ದಾನೆ. ಈತನ ತಂದೆ ಮಹಮ್ಮದ್ ಶಂಶೀರ್ ಕೊಲೆ ಆರೋಪಿ. ವಿದ್ಯಾಭ್ಯಾಸ ಅರ್ಧಕ್ಕೇ ನಿಲ್ಲಿಸಿದ್ದ ಸುಲೇಮಾನ್ ಎಲ್ಲಿಯೂ ಕೆಲಸಕ್ಕೂ ಹೋಗದೆ ಸುಮ್ಮನೆ ಅಲೆದಾಡುತ್ತಿದ್ದ. ಅಷ್ಟೇ ಅಲ್ಲದೆ, ಹಣ ಕೊಡು ಎಂದು ತಂದೆಯನ್ನು ಯಾವಾಗಲೂ ಪೀಡಿಸುತ್ತಿದ್ದ ಎನ್ನಲಾಗಿದೆ. 

ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿತ್ತು. ಈ ವೇಳೆ ತಂದೆ ಮಗನ ತಲೆಗೆ ಸರಳಿನಿಂದ ಹೊಡೆದಿದ್ದು, ತೀವ್ರ ರಕ್ತಸ್ರಾವಕ್ಕೀಡಾದ ಮಗ ಮೃತಪಟ್ಟಿದ್ದಾನೆ. ಈ ವಿಚಾರದ ಕುರಿತು ಆರ್.ಟಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಮ್ಮದ್ ಶಂಶೀರ್‌ನನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!