Saturday, June 6, 2026
Homeಕರಾವಳಿಮಂಗಳೂರು: ಬೈಕಂಪಾಡಿಯಲ್ಲಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಯುವಕನ ಹತ್ಯೆಗೆ ಯತ್ನ

ಮಂಗಳೂರು: ಬೈಕಂಪಾಡಿಯಲ್ಲಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಯುವಕನ ಹತ್ಯೆಗೆ ಯತ್ನ

- Advertisement -
- Advertisement -

ಮಂಗಳೂರು: ಇಲ್ಲಿನ ಬೈಕಂಪಾಡಿ ಜಂಕ್ಷನ್‌ ಬಳಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಯುವಕನೊಬ್ಬನನ್ನು ಹತ್ಯೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ರವಿರಾಜ್‌ ಬಂಗೇರ ಎಂಬವರ ಮೇಲೆ ಇಬ್ಬರು ಅಪರಿಚಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಗಂಭೀರ ಸ್ಥಿತಿಯಲ್ಲಿದ್ದ ರವಿರಾಜ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಮುಂದುವರೆಸಿದ್ದಾರೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರವಿರಾಜ್ 2019 ನವಂಬರ್ 19 ರಂದು ಸುರತ್ಕಲ್ ಜೀವನ್ ತಾರಾ ವೈನ್ ಶಾಪ್ ಬಳಿ ಕುಳಿತಿದ್ದಾಗ ಸಂದೇಶ್ ಪೂಜಾರಿ ಎಂಬಾತನನ್ನು ಕೊಲೆ ಮಾಡಲಾಗಿತ್ತು ಇದರಲ್ಲಿ ಈತ ಆರೋಪಿಯಾಗಿದ್ದ . ಆರು ತಿಂಗಳ ಹಿಂದೆ ಜೈಲಿನಿಂದ ಹೊರಬಂದಿದ್ದ ಈತ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ.

ನಟೋರಿಯಸ್ ರೌಡಿಶೀಟರ್ ಪಡ್ಡಾಯಿ ಮನೋಜ್ ತಂಡದ ಸದಸ್ಯ ಈತ.ಎಂಟು ವರ್ಷದ ಹಿಂದೆ ಪಡ್ಡಾಯಿಯಲ್ಲಿ ಒಬ್ಬನನ್ನು ಮೂರು ಪಿಸ್ ಮಾಡಿ ಗೋಣಿಗೆ ಹಾಕಿ ಮರಳಿನಲ್ಲಿ ಹೂತು ಹಾಕಿದ್ದ ಪ್ರಕರಣದಲ್ಲಿ ಕೂಡ ಆರೋಪಿಯಾಗಿದ್ದ.

- Advertisement -

Latest News

error: Content is protected !!