Wednesday, June 3, 2026
Homeತಾಜಾ ಸುದ್ದಿಬಾತ್ ರೂಮಿನಲ್ಲಿ ಶವವಾಗಿ ಪತ್ತೆಯಾದ ಖ್ಯಾತ ಫ್ಯಾಷನ್ ಡಿಸೈನರ್ ಶರ್ಬರಿ ದತ್ತಾ

ಬಾತ್ ರೂಮಿನಲ್ಲಿ ಶವವಾಗಿ ಪತ್ತೆಯಾದ ಖ್ಯಾತ ಫ್ಯಾಷನ್ ಡಿಸೈನರ್ ಶರ್ಬರಿ ದತ್ತಾ

- Advertisement -
- Advertisement -

ಕೋಲ್ಕತ್ತಾ: ಖ್ಯಾತ ಫ್ಯಾಷನ್ ಡಿಸೈನರ್ ಶರ್ಬರಿ ದತ್ತಾ ಕೋಲ್ಕತ್ತಾದ ತಮ್ಮ ನಿವಾಸದ ಬಾತ್ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಪಾರ್ಶ್ವವಾಯುವಿನಿಂದ ಶರ್ಬರಿ ದತ್ತಾ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ.

ಶಾರ್ಬರಿ, ಕೋಲ್ಕತ್ತಾದ ಬೋರ್ಡ್ ಸ್ಟ್ರೀಟ್‌ನಲ್ಲಿರುವ ತನ್ನ ನಿವಾಸದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಮಾಹಿತಿಯ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ವರದಿಯ ನಂತರವೇ ಶಾರ್ಬರಿ ಸಾವಿಗೆ ಕಾರಣ ತಿಳಿಯಲಿದೆ.

ಶಾರ್ಬರಿ ನಿಧನದ ನಂತ್ರ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಶೋಕ ವ್ಯಕ್ತಪಡಿಸುತ್ತಿದ್ದಾರೆ. ಗಾಯಕರಾದ ಪಾರ್ಮಾ ಬ್ಯಾನರ್ಜಿ ಮತ್ತು ಉಜಯಾನಿ ಮುಖರ್ಜಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಶಾರ್ಬರಿ ದತ್ತಾ ಪ್ರಸಿದ್ಧ ಬಂಗಾಳಿ ಕವಿ ಅಜಿತ್ ದತ್ತಾ ಅವರ ಪುತ್ರಿ. ಶಾರ್ಬರಿ ಅನೇಕ ವರ್ಷಗಳ ಕಾಲ ಫ್ಯಾಷನ್ ಡಿಸೈನರ್ ಆಗಿ ಕೆಲಸ ಆಡಿದ್ದಾರೆ. ಅವರು ವರ್ಣರಂಜಿತ ಧೋತಿ ಮತ್ತು ಪಂಜಾಬಿ ಕುರ್ತಾಗಳನ್ನು ಮೊದಲ ಬಾರಿಗೆ ಬಂಗಾಳಿ ಪುರುಷರಿಗಾಗಿ ಡಿಸೈನ್ ಮಾಡಿದ್ದರು.

- Advertisement -

Latest News

error: Content is protected !!