- Advertisement -
![]()
- Advertisement -
ಕಡಬ; ವಿಶ್ರಾಂತಿ ಪಡೆಯುತ್ತಿದ್ದಾಗ ಕುಸಿದು ಬಿದ್ದು ಕೃಷಿಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕಡಬ ಪ.ಪಂ ವ್ಯಾಪ್ತಿಯ ಗೊಡಾಲು ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಕೃಷಿಕ ಯತೀಂದ್ರ ಗೌಡ(49) ಮೃತಪಟ್ಟವರು.
ಆ.23ರಂದು ಯತೀಂದ್ರ ಗೌಡ ತನ್ನ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದವರು ಮನೆಗೆ ಊಟಕ್ಕೆಂದು ಬಂದಿದ್ದರು. ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಧಿಡೀರ್ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಕಡಬ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು(ಆ.24) ಬೆಳಿಗ್ಗೆ ಮೃತಪಟ್ಟಿದ್ದಾರೆ.
ಕೃಷಿಕರಾಗಿ ಬಹಳ ಶ್ರಮಜೀವಿಯಾಗಿದ್ದ ಯತೀಂದ್ರ ಅವರು ಪ್ರಯೋಗಶೀಲ ಕೃಷಿಯನ್ನು ಮಾಡಿ ಪರಿಚಿತರಾಗಿದ್ದರು.
- Advertisement -


