Wednesday, June 3, 2026
Homeಕರಾವಳಿಉಡುಪಿಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕೊಠಡಿ ಕಾಯ್ದಿರಿಸಲು ನಕಲಿ ವೆಬ್ ಸೈಟ್ ಮೂಲಕ ವಂಚನೆ; ಪೊಲೀಸ್ ದೂರು...

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕೊಠಡಿ ಕಾಯ್ದಿರಿಸಲು ನಕಲಿ ವೆಬ್ ಸೈಟ್ ಮೂಲಕ ವಂಚನೆ; ಪೊಲೀಸ್ ದೂರು ದಾಖಲು

- Advertisement -
- Advertisement -

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಮೂಲಕ ಭಕ್ತರಿಗೆ ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.

ಕರ್ನಾಟಕ ಟೆಂಪಲ್ ಅಕಮೋಡೇಷನ್ ಅಧಿಕೃತ ವೆಬ್ ಸೈಟ್ ಆಗಿದ್ದು ಅದೇ ಹೆಸರಿನಲ್ಲಿ ನಕಲಿ ವೆಬ್ ಸೈಟ್ ರಚಿಸಿ ಕೊಠಡಿ ಕಾಯ್ದಿರಿಸುವುದಾಗಿ ಮೋಸ ಮಾಡಲಾಗಿದೆ ಎಂದು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಮೂಕಾಂಬಿಕಾ ದೇವಸ್ಥಾನದ ಲಲಿತಾಂಬಿಕಾ ಅತಿಥಿಗೃಹದ ಕೊಠಡಿ ಕಾಯ್ದಿರಿಸಲು ಕ್ಯೂಆರ್ ಕೋಡ್ ನೀಡಿ ಹಣ ಪಡೆದು ನಕಲಿ ರಶೀದಿ ನೀಡಿ ವಂಚನೆ ಮಾಡಲಾಗಿದೆ.

ವಂಚನೆ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಗಮನಕ್ಕೆ ಬಂದ ಬಳಿಕ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!