Friday, May 3, 2024
Homeಅಪರಾಧಬೆಳ್ತಂಗಡಿ: ನಕಲಿ‌‌ ಮೆಸ್ಕಾಂ ಅಧಿಕಾರಿಯ ಮತ್ತೊಂದು ವಂಚನೆ ಬಯಲು; ಆಡಿಯೋ, ದಾಖಲೆ ಸಮೇತ ಸ್ಟೋರಿ ಇಲ್ಲಿದೆ

ಬೆಳ್ತಂಗಡಿ: ನಕಲಿ‌‌ ಮೆಸ್ಕಾಂ ಅಧಿಕಾರಿಯ ಮತ್ತೊಂದು ವಂಚನೆ ಬಯಲು; ಆಡಿಯೋ, ದಾಖಲೆ ಸಮೇತ ಸ್ಟೋರಿ ಇಲ್ಲಿದೆ

spot_img
- Advertisement -
- Advertisement -

ಬೆಳ್ತಂಗಡಿ: ಮೆಸ್ಕಾಂ ಇಲಾಖೆಯ ಸಮವಸ್ತ್ರ ಧರಿಸಿ, ಗುರುತು ಚೀಟಿ, ನಕಲಿ‌ ಪರಿಕರಗಳು, ಮೆಸ್ಕಾಂ ಜಾಗೃತ ದಳದ ಅಧಿಕಾರಿ ಎಂದು‌ ಮನೆ ಮನೆ ಕಪ್ಪು ಬಣ್ಣದ ಪಲ್ಸರ್ ಬೈಕ್ ನಲ್ಲಿ ಹೋಗಿ ಮೀಟರ್ ಚೆಕ್ ಮಾಡಿ ಮನೆಯರಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ನಾಳದಲ್ಲಿ ನಡೆದಿತ್ತು. ಇದಾದ ಬಳಿಕ ಇತನ ಇನ್ನೊಂದು ಮೋಸದ ಜಾಲ ಆಡಿಯೋ ಹಾಗೂ ದಾಖಲೆ ಸಮೇತ ಬಯಲಾಗಿದೆ.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಪಾಂಬೇಲು ನಿವಾಸಿ ಹರೀಶ್ ಯಾನೆ ಲೋಕೇಶ್ ಗೌಡ(27) ಎಂಬವನ ಮೇಲೆ ದೂರನ್ನು ನೀಡಲಾಗಿದೆ.ಮಂಗಳೂರು ಮೆಸ್ಕಾಂ ಇಲಾಖೆಯ ಸಮವಸ್ತ್ರ ಧರಿಸಿ, ಗುರುತು ಚೀಟಿ ತೋರಿಸಿ, ಜಾಗೃತ ದಳದ ಅಧಿಕಾರಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಈತ ಇತ್ತೀಚೆಗೆ ಕಳಿಯ ಗ್ರಾಮ ಪಂಚಾಯತು ವ್ಯಾಪ್ತಿಯ ಕೆಲವೊಂದು ಮನೆಗಳಿಗೆ ದಾಳಿ ಮಾಡುವ ರೀತಿಯಲ್ಲಿ ಭೇಟಿ ನೀಡಿ ಅನಧಿಕೃತವಾಗಿ ವಿದ್ಯುತ್ ಹೊಂದಿರುವುದಾಗಿ ಬೆದರಿಸಿ ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿಯನ್ವಯ ಮೆಸ್ಕಾಂ ಜೆ.ಇ.ಯವರ ಮಾಹಿತಿ ಮೇರೆಗೆ ಅ.1 ರಂದು ಕಛೇರಿಯ ಕಿರಿಯ ಅಧಿಕಾರಿ ನೀಡಿದ ದೂರು ಅರ್ಜಿಯನ್ನು(NC) ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಆ ಕೂಡಲೇ ಕಾರ್ಯ ಪ್ರವೃತರಾದ ಪೊಲೀಸರು ಹರೀಶ್ ಯಾನೆ ಲೋಕೇಶ್ ಗೌಡ ರವರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದರು.ವಿಚಾರಣೆಯ ವೇಳೆ ಈತ ಒಬ್ಬ ನಕಲಿ ಮೆಸ್ಕಾಂ ಅಧಿಕಾರಿ ಎಂದು ತಿಳಿದುಬಂದಿದೆ. ಪೊಲೀಸರು ಆತನಿಂದ ಮೆಸ್ಕಾಂ ಲಾಂಛನ ಇರುವ ನಕಲಿ ಪರಿಕರಗಳನ್ನು ಪಡೆದುಕೊಂಡು ಮುಂದೆ ಈ ರೀತಿ ಮಾಡದಂತೆ ಸೂಕ್ತ ಎಚ್ಚರಿಕೆ ನೀಡಿ ಆತನಿಂದ ಮುಚ್ಚಳಿಕೆ ಪತ್ರ ಬರೆಯಿಸಿ ಕಳುಹಿಸಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ: https://www.facebook.com/MahaXpressNews/videos/182883223994711/

ಮೂರು ವರ್ಷಗಳಿಂದ ಮೆಸ್ಕಾಂ ಅಧಿಕಾರಿ ಎಂದು ಹೇಳಿಕೊಂಡು ತಿರುಗಾಟ:
ಲೋಕೇಶ್ SSLC ವಿದ್ಯಾಭ್ಯಾಸವನ್ನು ಸ್ಥಳಿಯ ಸರಕಾರಿ ಶಾಲೆಯಲ್ಲಿ ಮಾಡಿ ಬಳಿಕ ಪ್ರಥಮ PUC ಮಾಡಿ ಅಲ್ಲಿ ಫೈಲ್ ಅಗಿ ನಂತರ ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿರುವ ಮಾಸ್ಟರ್ ಕೋಚಿಂಗ್ ಸೆಂಟರ್ ನಲ್ಲಿ ಎರಡನೇ ವರ್ಷದ PUC ಆರ್ಟ್ಸ್ ನೇರವಾಗಿ ತೆಗೆದುಕೊಂಡು ಪೂರೈಸಿದ್ದ ನಂತರ ವಿದ್ಯುತ್ ಇಲಾಖೆಯ ವರ್ಷದಲ್ಲಿ ಮೂರು ತಿಂಗಳು ಕಾಂಟ್ಯಾಕ್ಟ್ ಬೇಸ್ ನಲ್ಲಿ ವಿದ್ಯುತ್ ಲೈನ್ ಪಕ್ಕ ಇರುವ ಮರಗಳನ್ನು ಕಡಿಯಲು ಹೊರಗುತ್ತಿಗೆ ಆಧಾರದಲ್ಲಿ ಸೇರಿಕೊಂಡು ಕೆಲಸಕ್ಕೆ ಹೋಗುತ್ತಿದ್ದ. ಇದಾದ ಬಳಿಕ ಮೂರು ವರ್ಷದಿಂದ ಏಕಾಏಕಿ ನಾನು 8 ಲಕ್ಷ ಹಣ ಕೊಟ್ಟು ಮಂಗಳೂರು ವಿಭಾಗದಲ್ಲಿ ಜಿಲ್ಲಾ ಮೆಸ್ಕಾಂ ಜಾಗೃತ ದಳದ ಅಧಿಕಾರಿಯಾದೆ ಎಂದು ಹೇಳಿ ಬೆಳ್ತಂಗಡಿ ತಾಲೂಕು ಮನೆ ಮನೆಗೆ ಮೆಸ್ಕಾಂ ಸಮವಸ್ತ್ರ, ಕ್ಯಾಪ್, ನಕಲಿ ಐಡಿ ಕಾರ್ಡ್ ಹಾಕಿಕೊಂಡು ದಾಳಿ ಮಾಡುತ್ತಿದ್ದ. ಅದಲ್ಲದೆ ಬೆದರಿಸಿ ಹಣ ಕೂಡ ತೆಗೆದುಕೊಂಡು ಬರುತ್ತಿದ್ದ. ಬಿಡುವಿನ ಸಮಯದಲ್ಲಿ ತನ್ನ ಗೆಳೆಯರ ಅಂಗಡಿ ,ವ್ಯವಹಾರ ಮಾಡಿಕೊಂಡ ಸ್ಥಳಗಳಿಗೆ ಹೋಗಿ ಅಲ್ಲಿ ಬರುವ ಗ್ರಾಹಕರ ಬಳಿ ತನ್ನ ನಕಲಿ ಮೆಸ್ಕಾಂ ಸ್ಕ್ವಾಡ್ ಪರಿಚಯ ಮಾಡಿಕೊಂಡು ಮೊಬೈಲ್ ನಂಬರ್ ಪಡೆದು ನಂತರ ಕರೆ ಮಾಡಿ ಮೋಸ ಮಾಡಲು ಶುರು ಮಾಡುತ್ತಿದ್ದ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ: https://www.facebook.com/MahaXpressNews/videos/182883223994711/

ಅಂಗಡಿಯಲ್ಲಿ‌ ಕುಳಿತು ಹಣ ಕಳ್ಳತನ ಮಾಡಿದ್ದ:
ಉಪ್ಪಿನಂಗಡಿಯ ಪರಿಚಯಸ್ಥ ವ್ಯಕ್ತಿಯೊಬ್ಬರ ಅಂಗಡಿಗೆ ಬಂದು ಕುಳಿತುಕೊಂಡು ರೈಲು ಬಿಡುವ ಅಭ್ಯಾಸ ಮಾಡುತ್ತಿದ್ದ. ಒಮ್ಮೆ ಅವರು ಈತ ಇರುವ ವೇಳೆ ಅಂಗಡಿಯಿಂದ ಯಾವುದೋ ಕೆಲಸಕ್ಕೆಂದು ಈತನನ್ನು ಹೇಳಿಬಿಟ್ಟು ಹೊರಹೋಗಿ ಸ್ವಲ್ಪ ಸಮಯದ ಒಳಬರುವ ವೇಳೆ ಒಳಗೆ ಕ್ಯಾಶ್ ಬಾಕ್ಸ್ ನಿಂದ 4 ಸಾವಿರ ಹಣ ಕದ್ದು ಸುಮ್ಮನಿದ್ದ‌. ಸಂಜೆ ವೇಳೆ ಅಂಗಡಿ ಮಾಲಕ ಹಣ ವ್ಯತ್ಯಾಸ ಕಂಡು ಅನುಮಾನದಿಂದ ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಈತನ ಕೈಚಳಕ ಕೃತ್ಯ ಬಯಲಾಗಿತ್ತು ಬಳಿಕ ಲೋಕೇಶನಿಗೆ ಅಂಗಡಿ ಒಳಗೆ ಪ್ರವೇಶ ಮಾಡಿಸುತ್ತಿರಲ್ಲಿಲ್ಲ.

ಸ್ವಂತ ಭಾವನಿಗೆ ಮೋಸ ಮಾಡಿ ಕೊನೆಗೆ ಪತ್ನಿಯಿಂದ ಪ್ರಕರಣ ಬೆಳಕಿಗೆ:
ಲೋಕೇಶ್ ತನ್ನ ಪತ್ನಿಯನ್ನು ಕೆಲ ವರ್ಷದ ಹಿಂದೆ ಪ್ರೀತಿಸಿ ಮದುವೆಯಾದವ. ಈಗ ಈತನಿಗೆ ಒಂದು ಹೆಣ್ಣು ಮಗು ಕೂಡ ಇದೆ. ತಾನು ಊರೂರು ಸುತ್ತಿಕೊಂಡು ಹೋಗುತ್ತಿದ್ದಾಗ ಕಳಿಯ ಗ್ರಾಮದ ನಾಳದ ಕಡೆ ಹೋಗುತ್ತಿದ್ದಾಗ ಯುವತಿಯನ್ನು ತಾನು ಮೆಸ್ಕಾಂ ನಲ್ಲಿ ಜಾಗೃತಿ ದಳದ ಅಧಿಕಾರಿ ಎಂದು ಹೇಳಿ ಪ್ರೀತಿಸುತ್ತಿದ್ದ. ನಂತರ ಲೋಕೇಶ್ ಬಗ್ಗೆ ಯುವತಿ ಮನೆಯವರಿಗೆ ಆತನ ನಡವಳಿಕೆಯಿಂದ ಸಂಬಂಧ ಬೇಡ ಎಂದು ಕೆಲವರು ಬುದ್ದಿ ಮಾತು ಹೇಳಿದ್ದರು. ಆದ್ರೆ ಅದೆ ಯುವತಿಯನ್ನು ಹಠ ಹಿಡಿದು ಮದುವೆಯಾಗಿಬಿಟ್ಟ, ಆರು ತಿಂಗಳ ಹಿಂದೆ ಪತ್ನಿಯ ತಮ್ಮ ಬೆಂಗಳೂರು ಮೋಟರ್ ಶೋರೂಂ ನಲ್ಲಿ ಉದ್ಯೋಗದಲ್ಲಿದ್ದ. ಆತನಿಗೆ ಭಾವ ಲೋಕೇಶ್ ನಾನು ನಿನಗೆ ಮೆಸ್ಕಾಂ ನಲ್ಲಿ ಸರಕಾರಿ ಉದ್ಯೋಗ ತೆಗೆಸಿಕೊಡುವುದಾಗಿ ಹೇಳಿ ಅಲ್ಲಿಂದ ರಾಜಿನಾಮೆ ಕೊಡಿಸಿ ಊರಿಗೆ ಕರೆಸಿ ಆತನಿಂದ ಲಕ್ಷಗಟ್ಟಲೆ ಹಣ ಪಡೆದು ಆರು ತಿಂಗಳು ತಿರುಗಾಡುವಂತೆ ಮಾಡಿದ್ದ. ನಂತರ ಸರಕಾರಿ ಕೆಲಸದ ಆಸೆ ಬಿಟ್ಟು ಈತನಿಂದ ರೋಸಿಹೋಗಿ ವಾಪಸ್ ಬೆಂಗಳೂರಲ್ಲಿ ಬೇರೆ ಕೆಲಸಕ್ಕೆ ಸೇರಿಕೊಂಡ. ಈ ವಿಚಾರದಲ್ಲಿ ಪತ್ನಿಗೆ ಗಂಡನ ನಡವಳಿಕೆ ಮೇಲೆ ಅನುಮಾನ ಜಾಸ್ತಿಯಾಗಿ ಬರಲು ಆರಂಭವಾಗಿತ್ತು. ಅದನ್ನು ಖಚಿತ ಪಡಿಸಲು ಬೆಳ್ತಂಗಡಿ ಜೆ.ಇ ಶಿವಶಂಕರ್ ಗೆ ನೇರ ಫೋನ್ ಕರೆ ಮಾಡಿ ತನ್ನ ಗಂಡನ ಬಳಿ ಇದ್ದ ಮೆಸ್ಕಾಂ ಗೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಿ ಮಾಹಿತಿ ಪಡೆದಾಗ ಈತ ಒಬ್ಬ ನಕಲಿ ಮೆಸ್ಕಾಂ ಅಧಿಕಾರಿ ಎಂದು ಗೊತ್ತಾಯಿತು. ಇದರಿಂದ ಎಲ್ಲಾ ಪ್ರಕರಣ ಬೆಳಕಿಗೆ ಬಂದಿದೆ, ಇದರಿಂದ ಜೆ.ಇ ಶಿವಶಂಕರ್ ಎಚ್ಚೆತ್ತುಕೊಂಡು ತಮ್ಮ ಕಛೇರಿಯ ಕಿರಿಯ ಅಧಿಕಾರಿಯಿಂದ ಬೆಳ್ತಂಗಡಿ ಠಾಣೆಗೆ ದೂರು ಕೊಡಿಸಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ: https://www.facebook.com/MahaXpressNews/videos/182883223994711/

ಹಲವು ಮಂದಿಗೆ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚನೆ:
ಕಳೆದ ಮೂರು ವರ್ಷಗಳಿಂದ ತಾನು ಮೆಸ್ಕಾಂ ಜಾಗೃತಿ ದಳದ ಅಧಿಕಾರಿ( ಯಾನ್ ಸ್ಕ್ವಾಡ್ ದಾಯೆ) ನನಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲೂ ಹೋಗಿ ದಾಳಿ ಮಾಡಿ ವಿದ್ಯುತ್ ಸಂಪರ್ಕದ ಬಗ್ಗೆ ಕೇಸ್ ಮಾಡಬಹುದು ಎಂದು ಪುಂಗಿ ಬಿಡುತ್ತಿದ್ದ. ನಂತರ ಅವರ ಮೊಬೈಲ್ ನಂಬರ್ ಪಡೆದು ನಂತರ ವಾಟ್ಸಪ್ ಮೂಲಕ ಮೆಸ್ಕಾಂ ಇಲಾಖೆಯಲ್ಲಿ ಕೆಲಸದ ಆಮಿಷ ಒಡ್ಡಿ ಅವರಿಗೆ ತಾನೇ ಮಾಡಿಸಿರುವ ಐಡಿ ಕಾರ್ಡ್ ಫೋಟೋ ,ಕಿಸೆಗೆ ಐಡಿ ಕಾರ್ಡ್ ಹಾಕಿರುವ ಫೋಟೊ ,ತನ್ನ ಬೆಳ್ತಂಗಡಿ ಬ್ರಾಂಚ್ ಕೆನರಾ ಬ್ಯಾಂಕ್ ಖಾತೆಯ ಅಕೌಂಟ್ ಡಿಟೈಲ್ ಹಾಕಿ ಅವರಿಗೆ ವಾಯ್ಸ್ ಮೆಸೇಜ್ ಹಾಕಿ ಅವರ ಜೊತೆ ಮಾಯದ ಮಾತುಗಳನ್ನಾಡಿ “ನಿಮಗೆ ಮೆಸ್ಕಾಂ ನಲ್ಲಿ ಕೆಲಸ ಕೊಡಿಸುತ್ತೇನೆ. ಅದಕ್ಕೆ ನಾಲ್ಕು ಲಕ್ಷದ ಅರವತ್ತು ಸಾವಿರ ಅಗುತ್ತೆ. ನಾನು ನಿಮಗೆ ಎರಡು ಲಕ್ಷದ ಅರವತ್ತು ಸಾವಿರಕ್ಕೆ ಕೆಲಸ ಕೊಡಿಸಿ, ಇಪ್ಪತ್ತು ದಿನದಲ್ಲಿ ಕೆಲಸದ ಸರ್ಟಿಫಿಕೇಟ್ ಕೈಗೆ ನೀಡುತ್ತೇನೆ. ನಾನು ಈಗ ಮೈಸೂರು ಮೆಸ್ಕಾಂ ಇಲಾಖೆಯ ಕಛೇರಿಯಲ್ಲಿ ನಿಮ್ಮ ಕೆಲಸ ಖಚಿತ ಪಡಿಸಿ ಹೋರಬಂದೆ ದಯವಿಟ್ಟು ಹಣ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ” ಎಂದು ವಾಯ್ಸ್ ಮೆಸೇಜ್ ಹಾಕಿ ಕೊನೆಗೆ ಮೋಸಮಾಡುತ್ತಾನೆ. ಈತ ತನ್ನ ಊರಿನವರಿಗೆ ಹಾಗೂ ತನ್ನ ಸಂಬಂದಿಕರಿಗೆ ಹೆಚ್ಚಾಗಿ ಮೋಸ ಮಾಡಿದ್ದಾನೆ ಎನ್ನಲಾಗಿದೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ: https://www.facebook.com/MahaXpressNews/videos/182883223994711/

ಅನೇಕ ಮಂದಿ ಈತನಿಂದ ಮೋಸ ಹೋಗಿದ್ದರೂ ಪೊಲೀಸರಿಗೆ ದೂರು ನೀಡಲು ಮುಂದೆ ಬರುತ್ತಿಲ್ಲ ಕಾರಣ ಕೋರ್ಟ್ ಕಛೇರಿ ಅಳೆದಾಡಲು ತೊಂದರೆಯಾಗುತ್ತದೆ ಎಂದು ನೊಂದವರು ಹೇಳುತ್ತಿದ್ದಾರೆ. ಬೆಳ್ತಂಗಡಿ ಜನತೆ ಈತನಿಂದ ಮೋಸ ಹೋಗಿದ್ದಾರೆ ಧೈರ್ಯದಿಂದ ನೇರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ‌.

ಮೂರು ವರ್ಷದಿಂದ ಬೆಳ್ತಂಗಡಿ ತಾಲೂಕಿನಲ್ಲಿ ಲೋಕೇಶ್ ಗೌಡನ “ಯಾನ್ ಮೆಸ್ಕಾಂ ಸ್ಕ್ವಾಡ್ ದಾಯೆ” ಓಡಾಡುತ್ತಿದ್ದ ಚಲನಚಿತ್ರವನ್ನು ತನ್ನ ಪತ್ನಿಯೆ ಕೊನೆಗೂ ನಿಲ್ಲಿಸಿದ್ದಾಳೆ. ತನ್ನ ಗಂಡನ ಮೋಸದ ವಿಚಾರ ಪತ್ನಿಗೆ ತಿಳಿದು ಅಪಘಾತದಿಂದ ಲೋ ಬಿಪಿಯಾಗಿ ಕುಸಿದು ಬಿದ್ದು ಬೆಳ್ತಂಗಡಿ ಅಭಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

- Advertisement -
spot_img

Latest News

error: Content is protected !!