Friday, June 26, 2026
HomeUncategorizedಚಿನ್ನ ರನ್ನ ಎನ್ನುತ್ತಲೇ ಯಾಮಾರಿಸುತ್ತಿದ್ದಳು ಫೇಸ್ ಬುಕ್ ಸುಂದರಿ: ನಾನು ಚಿನ್ನು ಗೌಡ ಎನ್ನುತ್ತಲೇ...

ಚಿನ್ನ ರನ್ನ ಎನ್ನುತ್ತಲೇ ಯಾಮಾರಿಸುತ್ತಿದ್ದಳು ಫೇಸ್ ಬುಕ್ ಸುಂದರಿ: ನಾನು ಚಿನ್ನು ಗೌಡ ಎನ್ನುತ್ತಲೇ ಲಕ್ಷ ಲಕ್ಷ ದೋಚಿದ್ದಾಳೆ ಈ ಕಿನ್ನರಿ: ಕೊನೆಗೂ ಪೊಲೀಸರ ಬಲೆಗೆ ಬಿದ್ದಳು ಕಿಲಾಡಿ ನಾರಿ…

- Advertisement -
- Advertisement -

ಮೈಸೂರು:  ಫೇಸ್‌ಬುಕ್‌ನಲ್ಲಿ ನಕಲಿ ಪ್ರೊಫೈಲ್‌ ಕ್ರಿಯೇಟ್ ಮಾಜಿ ಅಮಾಯಕ ಯುವಕರನ್ನು ಪ್ರೀತಿಸುವುದಾಗಿ ಯಾಮಾರಿಸಿ ಲಕ್ಷಾಂತರ ರೂಪಾಯಿ ಹಣ, ಆಭರಣ ಲಪಟಾಯಿಸಿದ್ದ ಖತರ್ನಾಕ್  ಯುವತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಮಗನರದ ಮೇಘಾ (25) ಬಂಧಿತ ಯುವತಿ. ಫೇಸ್‌ಬುಕ್‌ನಲ್ಲಿ ʻಚಿನ್ನುಗೌಡ ಚಿನ್ನುಗೌಡʼ ಹೆಸರಿನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ ಈಕೆ, ರವಿ ಎಂಬಾತನಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದಾಳೆ. ರಿಕ್ವೆಸ್ಟ್‌ ಅಕ್ಸೆಪ್ಟ್‌ ಆಗಿ ಇಬ್ಬರೂ ನಂಬರ್‌ ಪರಸ್ಪರ ಹಂಚಿಕೊಂಡಿದ್ದಾರೆ. ನಂತರ ತನ್ನ ಹೆಸರು ಬಿಂದು ಗೌಡ ಎಂದು ಸುಂದರವಾದ ಹುಡುಗಿಯರ ಫೋಟೋಗಳನ್ನು ತನ್ನದೇ ಫೋಟೊ ಎಂದು ಪರಿಚಯಿಸಿಕೊಂಡಿದ್ದಾಳೆ.

ನನ್ನ ತಂದೆ ಶ್ರೀಮಂತ. ವಿಜಯನಗರದಲ್ಲಿ 2 ಪೆಟ್ರೋಲ್‌ ಬಂಕ್‌, ಬಾರ್‌ ಇಟ್ಟಿದ್ದಾರೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದು, ಮದುವೆಯಾಗಬೇಕು ಎಂಬ ಆಸೆ ಇದೆ. ನಿನ್ನ ಹುಟ್ಟು ಹಬ್ಬಕ್ಕೆ 45 ಲಕ್ಷ ರೂ. ಮೌಲ್ಯದ ಫಾರ್ಚುನರ್‌ ಕಾರು ಕೊಡಿಸುತ್ತೇನೆ. ಅದನ್ನು ಕೊಂಡುಕೊಳ್ಳಲು 1 ಲಕ್ಷ ರೂ. ಹಣ ಕಡಿಮೆ ಇದೆ. ಅದನ್ನು ನನ್ನ ಸ್ನೇಹಿತನ ಕೈಗೆ ನೀನು ಕೊಟ್ಟು ಕಳುಹಿಸು ಎಂದು ನಂಬಿಸಿದ್ದಾಳೆ.

ನಂತರ ಯುವಕನ ತಾಯಿಯನ್ನು ಪರಿಚಯ ಮಾಡಿಕೊಂಡು ಅವರ ಕತ್ತಿನಲ್ಲಿದ್ದ ಸರ ತುಂಬಾ ಇಷ್ಟಾ ಆಗಿದೆ ಎಂದು ಹೇಳಿದ್ದಾಳೆ. ನಿಮ್ಮ ಮನೆಯಲ್ಲಿರುವ ಆಭರಣಗಳನ್ನು ನನ್ನ ಸ್ನೇಹಿತನಿಗೆ ಕೊಟ್ಟು ಕಳುಹಿಸಿ. ಅದೇ ರೀತಿಯ ಡಿಸೈನ್‌ ಒಡವೆಗಳನ್ನು ಮಾಡಿಸಿಕೊಂಡು ನಿಮ್ಮ ಒಡವೆಗಳನ್ನು ವಾಪಸ್‌ ಕೊಡುತ್ತೇನೆಂದು ನಂಬಿಸಿ ಯಾಮಾರಿಸಿದ್ದಾಳೆ.

ಸುಮಾರು 450 ಗ್ರಾಂ ಒಡವೆಗಳನ್ನು ಪಡೆದು ನಂತರ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದಾಳೆ. ಈ ಸಂಬಂಧ ಯುವಕ ಮೇಟಗಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ನಂತರ ಪೊಲೀಸರು ಆರೋಪಿ ಬಿಂದುಗೌಡಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವಾರು ಯುವಕರನ್ನು ಇದೇ ರೀತಿ ಯಾಮಾರಿಸಿ ಲಕ್ಷಾಂತರ ಹಣ ಲಪಟಾಯಿಸಿರುವುದು ಬೆಳೆಕಿಗೆ ಬಂದಿದೆ.

2018ನೇ ಸಾಲಿನಲ್ಲಿ ಯೋಗಾನಂದ ಎಂಬ ಯುವಕನಿಗೂ 15 ಲಕ್ಷ ರೂ. ವಂಚಿಸಿದ್ದಾಳೆ. ಅಲ್ಲದೇ, ಶ್ರೀನಿವಾಸ್‌ ಎಂಬಾತನಿಂದ 9.70 ಲಕ್ಷ ರೂ. ವಂಚಿಸಿದ್ದಾಳೆ. ಇದೀಗ ಕಿಲಾಡಿ ಲೇಡಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!