Wednesday, June 3, 2026
Homeಕರಾವಳಿಮಂಗಳೂರುಬಂಟ್ವಾಳ; ಗಣಿಗಾರಿಕೆಗಾಗಿ ಬಳಕೆಯಾಗುವ ಸ್ಫೋಟಕ ಸ್ಫೋಟ;  ಸುತ್ತಮುತ್ತಲ ಮನೆಗಳಿಗೆ ಹಾನಿ

ಬಂಟ್ವಾಳ; ಗಣಿಗಾರಿಕೆಗಾಗಿ ಬಳಕೆಯಾಗುವ ಸ್ಫೋಟಕ ಸ್ಫೋಟ;  ಸುತ್ತಮುತ್ತಲ ಮನೆಗಳಿಗೆ ಹಾನಿ

- Advertisement -
- Advertisement -

ಬಂಟ್ವಾಳ; ಗಣಿಗಾರಿಕೆಗಾಗಿ ಬಳಕೆಯಾಗುವ ಸ್ಫೋಟಕ ಸ್ಫೋಟವಾಗಿ  ಸುತ್ತಮುತ್ತಲ ಮನೆಗಳಿಗೆ ಹಾನಿಯಾಗಿರುವ ಘಟನೆ ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕ ಎಂಬಲ್ಲಿ ನಡೆದಿದೆ.

ಬಂಟ್ವಾಳದ ಶ್ರೀ ರಾಮ್‌ ಕನ್‌ಸ್ಟ್ಟ್ರಕ್ಷನ್‌ ನ ಅಶೋಕ್ ಮತ್ತು ಅದರ ಬ್ಲಾಸ್ಟರ್‌ ಕೆಲಸ ಮಾಡುತ್ತಿದ್ದಾತ ಸ್ಫೋಟಕಗಳನ್ನು ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕ ಎಂಬಲ್ಲಿರುವ ಎನ್‌ ಎಸ್‌ ಕೋರೆಯ ಬಳಿಯಿರುವ ಮೋನಪ್ಪ ಪೂಜಾರಿರವರ ಬಾಬ್ತು ಜಾಗದಲ್ಲಿರುವ ಕಲ್ಲು ಬಂಡೆಗಳ ಮೇಲೆ ಯಾವುದೇ ಮುಂಜಾಗ್ರತಾ ಕ್ರಮ ಹಾಗೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ಮತ್ತು ಬೇಜವಾಬ್ದಾರಿಯಿಂದ ಇಟ್ಟಿದ್ದು, ಆ ಸ್ಫೋಟಕಗಳು ಬಿಸಿಲಿನ ತಾಪದಿಂದ ಸ್ಫೋಟಗೊಂಡು ಸುತ್ತಮುತ್ತಲಿನ ಮರಗಿಡಗಳು ಛಿದ್ರಗೊಂಡಿರುತ್ತದೆ ಹಾಗೂ ಪರಿಸರದ ಈಶ್ವರ ನಾಯ್ಕ ಮತ್ತು ವಸಂತ ಮೋಹನ ಎಂಬವರುಗಳ ಮನೆಗಳಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣ ಹಾನಿಗಳು ಸಂಭವಿಸಿರುವುದಿಲ್ಲ.ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!