Saturday, May 18, 2024
Homeತಾಜಾ ಸುದ್ದಿಇಂದಿನಿಂದ 2 ಸಾವಿರ ರೂಪಾಯಿ ನೋಟುಗಳ ಬದಲಾವಣೆಗೆ ಅವಕಾಶ; ನೋಟು ಬದಲಾವಣೆ ಮಾಡೋದು ಹೇಗೆ?

ಇಂದಿನಿಂದ 2 ಸಾವಿರ ರೂಪಾಯಿ ನೋಟುಗಳ ಬದಲಾವಣೆಗೆ ಅವಕಾಶ; ನೋಟು ಬದಲಾವಣೆ ಮಾಡೋದು ಹೇಗೆ?

spot_img
- Advertisement -
- Advertisement -

ಬೆಂಗಳೂರು; ಇಂದಿನಿಂದ ಸೆಪ್ಟೆಂಬರ್ 30ರ ಒಳಗೆ 2 ಸಾವಿರ ರೂಪಾಯಿ ನೋಟುಗಳನ್ನು ಬ್ಯಾಂಕುಗಳಿಗೆ ವಾಪಾಸ್ ನೀಡುವಂತೆ ಆರ್‌ಬಿಐ ಆದೇಶ ಹೊರಡಿಸಿದೆ. ಇನ್ನು 2000 ರೂ ಮುಖಬೆಲೆಯ ನೋಟುಗಳನ್ನು ಹೇಗೆ ವಾಪಾಸ್ ಮಾಡಬೇಕು ಎನ್ನುವುದಕ್ಕೆ ಈಗಾಗಲೇ ಆರ್‌ಬಿಐ ಸ್ಪಷ್ಟಪಡಿಸಿದೆ. ನೋಟು ವಾಪಾಸ್ ಕೊಡಲು ಅರ್ಜಿಯನ್ನೂ ಕೂಡಾ ಬಿಡುಗಡೆ ಮಾಡಿದೆ.

ಹಾಗಾದ್ರೆ 2000 ರೂ. ನೋಟು ಬದಲಾವಣೆ ಹೇಗೆ ಇಲ್ಲಿದೆ ವಿವರ….

ನೋಟು ಬದಲಾವಣೆಗೆ ಆರ್‌ಬಿಐ ಅರ್ಜಿ ಬಿಡುಗಡೆ ಮಾಡಿದ್ದು, ಬ್ಯಾಂಕ್‌ನಲ್ಲೇ ಈ ಎಕ್ಸ್‌ಚೇಂಜ್‌ ಅರ್ಜಿ ಸಿಗಲಿದೆ. ಆರ್‌ಬಿಐ ಬಿಡುಗಡೆ ಮಾಡಿರುವ ಅರ್ಜಿ ಭರ್ತಿ ಮಾಡಿ ಬ್ಯಾಂಕ್‌ಗೆ ಸಲ್ಲಿಸುವ ಮೂಲಕ 2000 ರೂ ಮುಖ ಬೆಲೆಯ ನೋಟು ಬದಲಿಸಿಕೊಳ್ಳಬಹುದಾಗಿದೆ. ಈ ಅರ್ಜಿಯು ನೋಟು ಬದಲಾವಣೆ ಮಾಡುವವರಿಗೆ ಮಾತ್ರ ಅನ್ವಯವಾಗಲಿದ್ದು, ಗ್ರಾಹಕರು ತಮ್ಮ ಬಳಿ 2000 ರೂ ನೋಟುಗಳಿದ್ದರೆ ಆಯಾ ಬ್ಯಾಂಕ್ ಶಾಖೆಗಳಿಗೆ ತೆರಳಿ ವಿನಿಮಯ ಮಾಡಿಕೊಳ್ಳಬಹುದಾಗಿದೆ. ವಿಷಯ ಅಂದ್ರೆ 2000 ರೂಪಾಯಿಗೆ ಬದಲಾಗಿ ಹಣವನ್ನ ತಮ್ಮ ಖಾತೆಗೆ ಜಮೆ ಮಾಡಲು ಅರ್ಜಿ ಬೇಕಿಲ್ಲ. ಖಾತೆದಾರರು ತಮ್ಮ ನಿರ್ದಿಷ್ಟ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಕೊಳ್ಳಲು ಇದು ಅನ್ವಯಿಸುವುದಿಲ್ಲ. ಅವರು ಎಂದಿನಂತೆ ತಮ್ಮ ಬ್ಯಾಂಕಿನ ಚಲನ್‌ನಲ್ಲಿ 2000 ರೂ. ನೋಟಿನ ವಿವರ ಬರೆದು ಜಮೆ ಮಾಡಿಕೊಳ್ಳಬಹುದಾಗಿದೆ.

ಇನ್ನು 2000 ರೂ ನೋಟುಗಳನ್ನು ಬದಲಾಯಿಸಲು ಆಧಾರ್‌ ಕಾರ್ಡ್‌ ಮುಂತಾದ ದಾಖಲೆಗಳು ಬೇಕಾಗಿಲ್ಲ. ಬ್ಯಾಂಕ್‌ನಲ್ಲಿ ಖಾತೆ ಇಲ್ಲದಿದ್ರೂ ನೋಟು ಬದಲಾವಣೆ ಮಾಡಿಕೊಳ್ಳಬಹುದು ಎಂದು ಎಸ್‌ಬಿಐ ಹೇಳಿದೆ.

ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್‌ ನೋಟು ರದ್ದತಿ ಪ್ರಕಟಿಸಿತ್ತು. ಅಲ್ಲದೆ, ತಕ್ಷಣದಿಂದಲೇ 2000 ರೂ. ನೋಟುಗಳ ಬದಲು ಬೇರೆ ನೋಟುಗಳನ್ನು ಜನರಿಗೆ ವಿತರಿಸಲು ಇಲ್ಲವೇ, ಅದನ್ನು ಖಾತೆದಾರರ ಖಾತೆಗೆ ಠೇವಣಿಯಾಗಿ ಜಮೆ ಮಾಡಿಸಿಕೊಳ್ಳಲು ಸೂಚನೆ ನೀಡಿತ್ತು. ಇದಕ್ಕೆ ಸೆ.30ರ ಗಡುವು ವಿಧಿಸಿತ್ತು.

- Advertisement -
spot_img

Latest News

error: Content is protected !!