Friday, June 5, 2026
Homeಕರಾವಳಿಕಾರು ಚಾಲಕನ ಕಷ್ಟಕ್ಕೆ ಮಿಡಿದ ಮಾಜಿ ಶಾಸಕ ವಸಂತ ಬಂಗೇರ..

ಕಾರು ಚಾಲಕನ ಕಷ್ಟಕ್ಕೆ ಮಿಡಿದ ಮಾಜಿ ಶಾಸಕ ವಸಂತ ಬಂಗೇರ..

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಮಲೆಬೆಟ್ಟು ನಿವಾಸಿ ಖಾಸೀಂ ಎಂಬವರು ಕಳೆದ ವರ್ಷ ಕಾರು ಅಪಘಾತದಿಂದ ಗಂಭೀರ ಸ್ವರೂಪದಲ್ಲಿ ಗಾಯಗೊಂಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರು. ಇಂದು ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ ಶ್ರೀ ಕೆ ವಸಂತ ಬಂಗೇರರವರನ್ನು ಗುರುನಾರಾಯಣ ಕಟ್ಟಡದಲ್ಲಿರುವ ತಮ್ಮ ಕಚೇರಿ ಮುಂದೆ ಭೇಟಿಯಾದ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ.ವಸಂತ ಬಂಗೇರರು ಸಾಂತ್ವನ ತುಂಬಿ ಮನೆಗೆ ಬೇಕಾದ ಅಗತ್ಯ ಆಹಾರ ಸಾಮಗ್ರಿಗಳನ್ನು ಒದಗಿಸಿದರು.ಹಾಗೂ ಖಾಸೀಂರವರ ಮಗನ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವನ್ನು ಕಲ್ಪಿಸುವ ಭರವಸೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್ ನ ಗ್ರಾಮೀಣ ಅಧ್ಯಕ್ಷ ದಿನೇಶ್ ಕೋಟ್ಯಾನ್, ಅಶೋಕ್,ಗುರುದೇವ ವಿದ್ಯಾಕೇಂದ್ರದ ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!