Thursday, June 25, 2026
Homeತಾಜಾ ಸುದ್ದಿಪಾರ್ಸೆಲ್ ಬಂದ ಡ್ರಗ್ಸ್ ಕೊಳ್ಳಲು ಹೋದಾಗಲೇ ಕಾಂಗ್ರೆಸ್ ನಾಯಕ, ಮಾಜಿ ಸಚಿವನ ಪುತ್ರನ ಬಂಧನ

ಪಾರ್ಸೆಲ್ ಬಂದ ಡ್ರಗ್ಸ್ ಕೊಳ್ಳಲು ಹೋದಾಗಲೇ ಕಾಂಗ್ರೆಸ್ ನಾಯಕ, ಮಾಜಿ ಸಚಿವನ ಪುತ್ರನ ಬಂಧನ

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಆರೋಪಿಗಳ ಪಟ್ಟಿ ದಿನ ಹೋದಂತೆ ದೊಡ್ಡದಾಗುತ್ತಲೇ ಹೋಗುತ್ತಿದೆ, ಈಗಾಗಲೇ ಪ್ರಕರಣದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಬಣ್ಣ ಬಯಲಾಗಿದೆ. ಇದೇ ಕೇಸ್ ನಲ್ಲಿ ಇದೀಗ ಕಾಂಗ್ರೆಸ್ ನಾಯಕ, ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ಬಂಧನವಾಗಿದೆ.

ಡ್ರಗ್ಸ್ ಪೇಡ್ಲರ್ ಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿಯನ್ನು ಬಂಧಿಸಲಾಗಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳಿಗೆ ರಕ್ಷಣೆ ನೀಡಿದ ಆರೋಪ ಹಾಗೂ ಪೆಡ್ಲರ್ ಗಳಿಂದ ಡ್ರಗ್ಸ್ ತೀರಿಸಿಕೊಳ್ಳುತ್ತಿದ್ದ ಆರೋಪದಡಿಯಲ್ಲಿ  ಬೆಂಗಳೂರು ಪೊಲೀಸರು ದರ್ಶನ್ ಅವರನ್ನು ಬಂಧಿಸಿದ್ದಾರೆ.

ಚಾಮರಾಜಪೇಟೆಯ ಫಾರಿನ್  ಪೋಸ್ಟ್ ಆಫೀಸ್ ಗೆ ಬಂದ ಪಾರ್ಸೆಲ್ ತರಲು ಹೋದಾಗ ಬಂಧಿಸಿದ್ದಾರೆ. ಇನ್ನು ದರ್ಶನ್ ಗೆ  ಅಂಚೆ ಕಚೇರಿಗೆ ಡ್ರಗ್ಸ್ ಮತ್ತು ಹೈಡ್ರೋ ಗಾಂಜಾ ಪಾರ್ಸೆಲ್ ನಲ್ಲಿ ಬಂಧಿತ್ತು. ಅದನ್ನು ತರೋದಕ್ಕೆ ಹೋದಾಗ ಅರೆಸ್ಟ್ ಮಾಡಿದ್ದಾರೆ.

- Advertisement -

Latest News

error: Content is protected !!