Thursday, June 4, 2026
Homeತಾಜಾ ಸುದ್ದಿದೇವೇಗೌಡರಿಗೆ ಅರಳು ಮರಳು ಆಗಿರಬೇಕು; ಮಂಗಳೂರಿನಲ್ಲಿ ಮಾಜಿ ಸಿಎಂ ವೀರಪ್ಪ ಮೊಯಿಲಿ ಲೇವಡಿ

ದೇವೇಗೌಡರಿಗೆ ಅರಳು ಮರಳು ಆಗಿರಬೇಕು; ಮಂಗಳೂರಿನಲ್ಲಿ ಮಾಜಿ ಸಿಎಂ ವೀರಪ್ಪ ಮೊಯಿಲಿ ಲೇವಡಿ

- Advertisement -
- Advertisement -

ಮಂಗಳೂರು: ಲೋಕಸಭಾ ಚುನಾವಣೆಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿರುವುದನ್ನು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಟೀಕಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರಪ್ಪ ಮೊಯಿಲಿ, ದೇವೇಗೌಡರು ಪಾಪ ಬಿಜೆಪಿ ಸೇರಿದ್ದಾರೆ, ಅವರು ಸೇರಿರುವುದರಿಂದ ಮೈನಸ್ ಹೊರತು ಪ್ಲಸ್ ಇಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ದೇವೇಗೌಡರಂತಹ ಹಿರಿಯರು ದಿನಕ್ಕೊಂದು ವೇಷ ಹಾಕಿದರೆ ಪರಿಸ್ಥಿತಿ ಏನಾಗಬೇಕು ಎಂದು ಪ್ರಶ್ನೆ ಮಾಡಿರುವ ಮೊಯಿಲಿ, ಅಲ್ಪಸಂಖ್ಯಾತರಿಗೆ 4% ಮೀಸಲಾತಿ ನೀಡಿದ್ದೇನೆ ಎಂದು ದೇವೇಗೌಡರು ಹೇಳುತ್ತಿದ್ದು ಮೊದಲು 6% ಮೀಸಲಾತಿ ಕೊಟ್ಟವನು ನಾನು ಎಂದು ಹೇಳಿದ್ದಾರೆ.

ಪಾಪ ದೇವೇಗೌಡರಿಗೆ ಅರಳು ಮರಳು ಆಗಿರಬೇಕು ಎಂದು ಲೇವಡಿ ಮಾಡಿರುವ ವೀರಪ್ಪ ಮೊಯಿಲಿ, ನಾನು ಅವರನ್ನು ದೂರುವುದಿಲ್ಲ ಬದಲಾಗಿ ಅವರ ಪ್ರಾಯವನ್ನು ದೂರುತ್ತೇನೆ ಎಂದಿದ್ದಾರೆ.

- Advertisement -

Latest News

error: Content is protected !!