Wednesday, June 26, 2024
Homeತಾಜಾ ಸುದ್ದಿಮೊಮ್ಮಗನೊಂದಿಗೆ ಚೆಸ್ ಆಡಿದ ಸಿದ್ದರಾಮಯ್ಯ, ಆಟದಲ್ಲಿ ಗೆದ್ದವರ್ಯಾರು ಗೊತ್ತಾ?

ಮೊಮ್ಮಗನೊಂದಿಗೆ ಚೆಸ್ ಆಡಿದ ಸಿದ್ದರಾಮಯ್ಯ, ಆಟದಲ್ಲಿ ಗೆದ್ದವರ್ಯಾರು ಗೊತ್ತಾ?

spot_img
- Advertisement -
- Advertisement -

ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ವಿಧಾನಸಭೆ ಪ್ರತಿಪಕ್ಷದ ನಾಯಕರು. ಕೊರೊನಾ ಸಂದರ್ಭದಲ್ಲೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿರುವ ಅವರು, ಇದರ ಮಧ್ಯೆಯೂ ಬಿಡುವು ಮಾಡಿಕೊಂಡು ಮೊಮ್ಮಗನೊಂದಿಗೆ ಚೆಸ್ ಆಡಿದ್ದು ಈ ಫೋಟೋ ಈಗ ವೈರಲ್ ಆಗಿದೆ.

ಹೌದು, ಸಿದ್ದರಾಮಯ್ಯನವರು ಬಿಡುವಿನ ವೇಳೆ ಮೈಸೂರಿನ ತಮ್ಮ ನಿವಾಸದಲ್ಲಿ ಮೊಮ್ಮಗನ ಜೊತೆ ಚೆಸ್ ಆಡಿದ್ದು, ಅಲ್ಲಿಯೂ ತಮ್ಮ ಚಾಣಾಕ್ಷತನ ತೋರಿಸಿದ್ದಾರೆ. ರಾಜಕೀಯದಲ್ಲಿ ಎದುರಾಳಿಗಳಿಗೆ ಪಟ್ಟು ಹಾಕುವ ಸಿದ್ದರಾಮಯ್ಯ ಚೆಸ್ ಆಟದಲ್ಲಿ ಪ್ರಾವೀಣ್ಯತೆ ತೋರ್ಪಡಿಸಿದ್ದಾರೆ.

ಮೊಮ್ಮಗ ಸಹ ತಾತನ ಟ್ರಿಕ್ಸ್ ಗೆ ಪ್ರತಿತಂತ್ರ ತೋರಿಸಿದ್ದು, ಈ ಇಬ್ಬರೂ ಚೆಸ್ ಆಟದಲ್ಲಿ ಏಕಾಗ್ರತೆಯಿಂದ ತೊಡಗಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -
spot_img

Latest News

error: Content is protected !!