Wednesday, June 3, 2026
Homeಕರಾವಳಿಪ್ರತಿಯೊಬ್ಬ ಮಹಿಳೆಯೂ ಬಾಹ್ಯಕಾಶಕ್ಕೆ ಹೋಗುವ ಸಾಮರ್ಥ್ಯ ಹೊಂದಿದ್ದಾಳೆ; ನ್ಯಾಯಾಧೀಶೆ ಶ್ರೀಮತಿ ಪ್ರಕೃತಿ ಕಲ್ಯಾಣಪುರ

ಪ್ರತಿಯೊಬ್ಬ ಮಹಿಳೆಯೂ ಬಾಹ್ಯಕಾಶಕ್ಕೆ ಹೋಗುವ ಸಾಮರ್ಥ್ಯ ಹೊಂದಿದ್ದಾಳೆ; ನ್ಯಾಯಾಧೀಶೆ ಶ್ರೀಮತಿ ಪ್ರಕೃತಿ ಕಲ್ಯಾಣಪುರ

- Advertisement -
- Advertisement -


ಪುತ್ತೂರು: ಪ್ರತಿಯೊಬ್ಬ ಮಹಿಳೆಯೂ ಸುನಿತಾ ವಿಲಿಯಂ ರಂತೆ ಬಾಹ್ಯಾಕಾಶಕ್ಕೆ ಹೋಗುವ ಸಾಮರ್ಥವನ್ನು ಹೊಂದಿದ್ದಾಳೆ, ಆಕೆಗೆ ಅದಕ್ಕೆ ಪೂರಕ ವಾತಾವರಣ ಮತ್ತು ಶಿಕ್ಷಣ ದೊರಕಿದ್ದಾಗ ಇದು ಸಾಧ್ಯ, ಇದಕ್ಕೆ ಮಹಿಳೆಯರಿಗೆ ಸೂಕ್ತ ಬೆಂಬಲ ದೊರಕಬೇಕು ಎಂದು ಮಾನ್ಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧಿಶರು ಮತ್ತು ಪುತ್ತೂರು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ನ್ಯಾಯಧೀಶೆ ಶ್ರೀಮತಿ ಪ್ರಕೃತಿ ಕಲ್ಯಾಣಪುರ ರವರು ಹೇಳಿದರು, ಅವರು ಅಧಿವಕ್ತಾ ಪರಿಷತ್, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಹಿಳಾ ಬಂಧುತ್ವ ವೇದಿಕೆ, ಪುತ್ತೂರು ಇವರ ಸಹಯೋಗದೊಂದಿಗೆ ಪುತ್ತೂರಿನ ಒಕ್ಕಲಿಗ ಗೌಡ ಸೇವಾ ಸಂಘದ ಚುಂಚುಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧಿವಕ್ತಾ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀಮತಿ ಪುಷ್ಪಾಲತಾ ಯು.ಕೆ ವಹಿಸಿ ಮಾತಾನಾಡಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ವನ್ನು ತೋರಿಸುತ್ತಿದ್ದಾರೆ ಮಹಿಳೆ ಒಬ್ಬಳು ಶಕ್ತಿಯಾಗಿ ಹೊರಹೊಮ್ಮಿದ್ದಾಳೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಂಳತಿಮೊಗೇರು ಇಲ್ಲಿನ ಮುಖ್ಯೋಪಾಧ್ಯಯರಾದ ಶ್ರೀಮತಿ ಸಂಧ್ಯಾರಾಣಿ ಮತ್ತು ಮಹಿಳಾ ಬಂಧುತ್ವ ವೇದಿಕೆಯ ಸಂಚಾಲಕರಾದ ಶ್ರೀಮತಿ ಸುಮಂಗಲ ಶೆಣೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬನ್ನೂರು ಗ್ರಾಮ ಪಂಚಾಯತ್ ನ ಸ್ವಚ್ಚವಾಹಿನಿ ಇದರ ಶ್ರೀಮತಿ ಗಿರಿಜಾ ಶಿವಪ್ಪ ನಾಯ್ಕ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಅಧಿವಕ್ತಾ ಪರಿಷತ್ ನ ಪುತ್ತೂರು ತಾಲೂಕು ಕಾರ್ಯದರ್ಶಿ ಶ್ರೀಮತಿ ಪೂಜ ಬೆತ್ತಾಡಿ ಅತಿಥಿಗಳನ್ನು ಸ್ವಾಗತಿಸಿ, ವಿವೇಕಾನಂದ ಕಾನೂನು ಮಹಾ ವಿಧ್ಯಾಲಯದ ವಿದ್ಯಾರ್ಥಿನಿ ಕು. ವರ್ಷ ಪ್ರಾರ್ಥಿಸಿದರು, ನ್ಯಾಯವಾದಿ ಶ್ರೀಮತಿ ಚಂದ್ರಾವತಿ ಟಿ ಅಂಚನ್ ವಂದಿಸಿದರು. ನ್ಯಾಯವಾದಿಗಳಾದ ಕು. ಅರ್ಪಿತ ಪ್ರಶಾಂತ್ ಮತ್ತು ಫಮಿದಾ ಅಕ್ತರ್ ನಡೆಸಿಕೊಟ್ಟರು.

ನಂತರ ನಡೆದ ಕಾರ್ಯಗಾರದಲ್ಲಿ ಮಹಿಳೆಯರಿಗೆ ವಿವಿಧ ವಿಚಾರಗಳ ಕುರಿತಂತೆ ಮಹಿಳಾ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀಮತಿ ಪ್ರೀಮಿ ಫೆರ್ನಾಂಡಿಸ್ ರವರು ಅರಿವು ಮೂಡಿಸುವ ಮಾಹಿತಿ ನೀಡಿದರು. ಮತ್ತು 2ನೇ ಅವಧಿಯಲ್ಲಿ ಅಧಿವಕ್ತಾ ಪರಿಷತ್ ನ ಮಂಗಳೂರು ತಾಲೂಕು ಅಧ್ಯಕ್ಷರಾದ ಶ್ರೀಮತಿ ಆಶಾ ಪಿ ರೈ ಮಹಿಳೆ ದೃಷ್ಟಿ ಮತ್ತು ದಿಕ್ಕು ಎಂಬ ವಿಚಾರದ ಕುರಿತಾಗಿ ಮಾತನಾಡಿದರು. ನಂತರ ಸಮಾರೋಪ ಭಾಷಣವನ್ನು ಅಧಿವಕ್ತಾ ಪರಿಷತ್ ನ ಜಿಲ್ಲಾಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ರವರು ನಡೆಸಿಕೊಟ್ಟರು,ಅತಿಥಿ ಅಭ್ಯಾಗತರಿಗೆ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಜಯಪ್ರಕಾಶ್ ಭಂಡಾರಿ ಧನ್ಯವಾದ ಸೂಚಿಸಿದರು. ಅಧಿವಕ್ತಾ ಪರಿಷತ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಜಗದೀಶ್ ಡಿ.ಪಿ, ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಜಯಪ್ರಕಾಶ್ ಎನ್, ಕಾರ್ಯುದರ್ಶಿ ದೀಪಕ್, ನ್ಯಾಯವಾದಿಗಳಾದ ಚಿದಾನಂದ ಬೈಲಾಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!