Thursday, June 4, 2026
Homeಕರಾವಳಿಉಡುಪಿಉಡುಪಿ; ನದಿಯಲ್ಲಿ ಈಜಾಡುವಾಗ ಬಿದ್ದು ಹೋದ ಚಿನ್ನದ ಸರ ಹುಡುಕಿ ಕೊಟ್ಟ ಈಶ್ವರ್

ಉಡುಪಿ; ನದಿಯಲ್ಲಿ ಈಜಾಡುವಾಗ ಬಿದ್ದು ಹೋದ ಚಿನ್ನದ ಸರ ಹುಡುಕಿ ಕೊಟ್ಟ ಈಶ್ವರ್

- Advertisement -
- Advertisement -

ಉಡುಪಿ; ನದಿಯಲ್ಲಿ ಈಜಾಡುವಾಗ ಬಿದ್ದು ಹೋದ ಚಿನ್ನದ ಸರವನ್ನು ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಹುಡುಕಿಕೊಟ್ಟ ಘಟನೆ ಉಡುಪಿಯ ಬ್ರಹ್ಮಾವರ ತಾಲೂಕಿನ ಹೇರೂರು ಮಡಿಸಾಲು ಹೊಳೆಯಲ್ಲಿ ನಡೆದಿದೆ.

ಭಾನುವಾರ  ಮಧ್ಯಾಹ್ನ ತೂಗು ಸೇತುವೆ ಬಳಿ ನಾಲ್ವರು ಸ್ನಾನಕ್ಕೆ ತೆರಳಿದ್ದರು. ಈ ವೇಳೆ ವ್ಯಕ್ತಿಯೊಬ್ಬರ ಸುಮಾರು ನಾಲ್ಕು ಲಕ್ಷ ಮೌಲ್ಯದ ಚಿನ್ನದ ಸರ ಕಳೆದು ಹೋಗಿತ್ತು. ಕೂಡಲೇ ಅವರು ಆಪತ್ಭಾಂಧವ ಈಶ್ವರ್ ಮಲ್ಪೆ ಅವರನ್ನು ಸಂಪರ್ಕಿಸಿ ಹುಡುಕಿಕೊಂಡುವಂತೆ ಮನವಿ ಮಾಡಿದ್ದಾರೆ. ಅದರಂತೆ ನದಿಯ ಆಳದಲ್ಲಿ ಹುಡುಕಾಟ ನಡೆಸಿದ ಅವರು ಹುಡುಕಿಕೊಟ್ಟಿದ್ದಾರೆ.ಈಶ್ವರ್ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಸರ ಮರಳಿ ಪಡೆದವರು ಕೃತಜ್ಞತೆ ಸಲ್ಲಿಸಿದ್ದಾರೆ.ಇನ್ನು ಈಶ್ವರ ಮಲ್ಪೆ ಅವರು ನೂರಾರು ಜೀವಗಳನ್ನು ಉಳಿಸಿದ್ದಾರೆ. ಅಲ್ಲದೇ 900 ಕ್ಕಿಂತ ಹೆಚ್ಚು ಮೃತದೇಹಗಳನ್ನು ನೀರಿನಿಂದ ಮೇಲೆತ್ತಿದ್ದಾರೆ.

- Advertisement -

Latest News

error: Content is protected !!