- Advertisement -
- Advertisement -
ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣೆಯಿಂದ ಅತ್ಯಾಚಾರ ಎಸಗಿದ ಆರೋಪಿಯೋರ್ವ ಲಾಕಪ್ ನಿಂದ ಎಸ್ಕೇಪ್ ಆಗಿ, ಮರು ಬಂಧಿಸಲ್ಪಟ್ಟ ಘಟನೆ ನಡೆದಿದೆ.
12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ನಿಜಾಮ್ ಎಂಬ ಆರೋಪಿಯನ್ನು ಅ.09 ರಂದು ಪೊಲೀಸರು ಬಂಧಿಸಿ ಸೆಲ್ ನಲ್ಲಿ ಇರಿಸಿದ್ದರು, ಮಧ್ಯಾಹ್ನ ಊಟದ ಸಮಯದಲ್ಲಿ ಆತನನ್ನು ಹೊರ ಕೂರಿಸಿ ಊಟ ನೀಡಲಾಗಿತ್ತು, ಈ ಸಂದರ್ಭದಲ್ಲಿ ಆರೋಪಿಯು ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭಿಸಿದೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಸಂಜೆ ಆರು ಗಂಟೆಯ ಒಳಗೆ ಕಾರ್ಯಾಚರಣೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ
- Advertisement -