Friday, June 5, 2026
Homeಕರಾವಳಿಅನ್ಲೈನ್ ನಲ್ಲಿ ಬುಕ್‌ ಮಾಡಿದ್ದು ಕುಂಕುಮ ; ವ್ಯಕ್ತಿಗೆ ಬಂದದ್ದು ಮರದ ತುಂಡುಗಳು!

ಅನ್ಲೈನ್ ನಲ್ಲಿ ಬುಕ್‌ ಮಾಡಿದ್ದು ಕುಂಕುಮ ; ವ್ಯಕ್ತಿಗೆ ಬಂದದ್ದು ಮರದ ತುಂಡುಗಳು!

- Advertisement -
- Advertisement -

ಬೆಳ್ತಂಗಡಿ : ಅನ್ಲೈನ್ ಮೂಲಕ ತಮಗೆ ಬೇಕಾದ ವಸ್ತುಗಳನ್ನು ಬುಕ್ ಮಾಡಿ ತಾವು ಇರುವ ಸ್ಥಳಕ್ಕೆ ಡೆಲಿವರಿ ಪಡೆಯುವುದು ಹೆಚ್ಚಾಗಿದೆ ಅದರಲ್ಲಿಯೂ ಕೆಲವರಿಗೆ ವಂಚನೆ ಆಗುತ್ತಿರುವುದು ಮಾತ್ರ ಇತ್ತೀಚಿನ ದಿನಗಳನ್ನು ಹೆಚ್ಚಾಗಿದೆ.

ಬೆಳ್ತಂಗಡಿ ತಾಲೂಕು ಕಛೇರಿಯ ಡಾಟಾ ಎಂಟ್ರಿ ಉದ್ಯೋಗಿ ಮೂಲತಃ ಸುಳ್ಯದ ನಿವಾಸಿ ಪ್ರವೀಣಾ ಕುಮಾರ್ ಅಮೇಜಾನ್ ಸಂಸ್ಥೆಯ ಮೂಲಕ ತಮಗೆ 200 ರೂಪಾಯಿಯ ಕುಂಕುಮವನ್ನು ಬುಕ್ ಮಾಡಿದ್ದಾರೆ. ಇಂದು ತಮ್ಮ ಕಛೇರಿಗೆ ಸಂಸ್ಥೆಯ ನೌಕರ ಬಂದು ಬಾಕ್ಸ್ ಮೂಲಕ ಡೆಲಿವರಿ ನೀಡಿ 200 ರೂಪಾಯಿ ಪಡೆದು ಹೋಗಿದ್ದಾನೆ. ಕುಂಕುಮ ಪ್ಯಾಕ್ ಪರಿಶೀಲಿಸಲು ಬಾಕ್ಸ್ ಓಪನ್ ಮಾಡಿದಾಗ ಪ್ರವೀಣಾ ಕುಮಾರ್ ಅವರಿಗೆ ಶಾಕ್ ಕಾದಿತ್ತು ಏಕೆಂದರೆ ಬಾಕ್ಸ್ ತುಂಬ ಮರದ ತುಂಡು ಸಿಕ್ಕಿದೆ.

ತಮಗೆ ಬಂದ ಮರದ ತುಂಡಿರುವ ಬಾಕ್ಸ್ ಅನ್ನು ವಾಪಸ್ ಅಮೇಜಾನ್ ಸಂಸ್ಥೆಗೆ ಹಿಂದಿರುಗಿಸಲು ನಿರ್ಧರಿಸಿದ್ದು, ಈ ಬಗ್ಗೆ ಬೆಳ್ತಂಗಡಿ ತಾಲೂಕು ಕಛೇರಿ ಉದ್ಯೋಗಿ ಪ್ರವೀಣಾ ತಮಗೆ ಮೋಸ ಅಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!