Monday, April 29, 2024
Homeಕರಾವಳಿಸುಳ್ಯ :ಎಣ್ಮೂರಿನಲ್ಲಿ ಬಾಡಿಗೆ ಮನೆಗೆ ಎನ್.ಐ.ಎ ದಾಳಿ ಪ್ರಕರಣ;ಸಮನ್ಸ್ ನೀಡಿ, ಮೊಬೈಲ್ ವಶಕ್ಕೆ ಪಡೆದ ಅಧಿಕಾರಿಗಳು

ಸುಳ್ಯ :ಎಣ್ಮೂರಿನಲ್ಲಿ ಬಾಡಿಗೆ ಮನೆಗೆ ಎನ್.ಐ.ಎ ದಾಳಿ ಪ್ರಕರಣ;ಸಮನ್ಸ್ ನೀಡಿ, ಮೊಬೈಲ್ ವಶಕ್ಕೆ ಪಡೆದ ಅಧಿಕಾರಿಗಳು

spot_img
- Advertisement -
- Advertisement -

ಸುಳ್ಯ : ಎನ್.ಐ.ಎ ಅಧಿಕಾರಿಗಳ ತಂಡ ಪ್ರಕರಣವೊಂದರ ಸಂಬಂಧ ಮಾ‌.5 ರಂದು ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಣ್ಮೂರಿನ ಕುಲಾಯಿತೋಡು ಎಂಬಲ್ಲಿನ ಬಾಡಿಗೆ ಮನೆ ಮೇಲೆ ಬೆಳಗ್ಗೆ  ಎನ್ ಐ ಎ ಅಧಿಕಾರಿಗಳು ದಾಳಿ ಮಾಡಿ ಮನೆಯಲ್ಲಿ  ನಡೆಸಿ ನಂತರ ಬೀಜು ಎಂಬಾತನಿಗೆ ಸಮನ್ಸ್ ನೀಡಿ ಮೊಬೈಲ್ ಫೋನ್ ವಶಕ್ಕೆ ಪಡೆದು ತೆರಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಿಂತಿಕಲ್ಲು ಬಳಿಯ ಕಲ್ಮಡ್ಕ ನಿವಾಸಿ ಚಿದಾನಂದ ಎಂಬವರ ಬಾಡಿಗೆ ಮನೆ ಮೇಲೆ ಬೆಂಗಳೂರು ಬ್ರಾಂಚ್ ನ ಎನ್.ಐ.ಎ ಅಧಿಕಾರಿಗಳಾದ ಡಿವೈಎಸ್ಪಿ ರಾಜನ್ ಪಿ.ವಿ , ಸಬ್ ಇನ್ಸ್ಪೆಕ್ಟರ್ ಮಂಜಪ್ಪ , ಕಾನ್ಟೇಬಲ್ ಸುರೇಶ್.ಸಿ ನೇತೃತ್ವದ ಮೂರು ಜನರ ತಂಡ ಬೆಳ್ಳಾರೆ ಪೊಲೀಸರ ಸಹಕಾರದಲ್ಲಿ ಮಾ.5 ರಂದು ಬೆಳಗ್ಗೆ 6 ಗಂಟೆಗೆ ದಾಳಿ ಮಾಡಿ ಮನೆಯನ್ನು ಪರಿಶೀಲನೆ ನಡೆಸಿದ್ದಾರೆ‌.

ಪ್ರಕರಣದ ವಿವರ: 25-10-2023 ರಂದು RC-28/2023/NIA/DLI ಯಲ್ಲಿ 120B,121,121A&122 ಜೊತೆಗೆ 3,25 ಆರ್ಮ್ಸ್ 13 ,18 ಮತ್ತು UA(P) ಅಡಿಯಲ್ಲಿ ದಾಖಲಾದ ಪ್ರಕರಣ ಸಂಬಂಧಿಸಿದಂತೆ ಬೆಳ್ಳಾರೆಯ ಚಿದಾನಂದ ಎಂಬವರ ಬಾಡಿಗೆ ಮನೆಯಲ್ಲಿ ಎರಡು ದಿನದ ಹಿಂದೆ ಬಂದ ಕೇರಳ ರಾಜ್ಯದ ಇಡುಕ್ಕಿಯ ಬಿಜು ಅಬ್ರಾಹಂ @ ಬಿಜು ಎಮ್.ಎ (45) ಎಂಬಾತನ ವಾಸವಾಗಿದ್ದ. ಈ  ಮನೆಗೆ ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ ನಂತರ ಬಿಜುಗೆ  ಸಮನ್ಸ್ ನೀಡಿದ್ದಾರೆ‌.

ಮೊಬೈಲ್ ವಶಕ್ಕೆ: ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ ಬಳಿಕ ಬಿಜು ಬಳಸುತ್ತಿದ್ದ ಮೊಬೈಲ್ ಫೋನ್‌ ಮತ್ತು ಅದರಲ್ಲಿದ್ದ ಜಿಯೋ ಕಂಪನಿಯ ಸಿಮ್ ಕಾರ್ಡ್ ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!