Thursday, April 25, 2024
Homeಕ್ರೀಡೆT20 ಸರಣಿಯ ಮೂರನೇ ಪಂದ್ಯ: ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯ

T20 ಸರಣಿಯ ಮೂರನೇ ಪಂದ್ಯ: ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯ

spot_img
- Advertisement -
- Advertisement -

ಅಹಮದಾಬಾದ್: ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಭಾರತ ತಂಡದ ಜಯದ ಆಸೆ ಕಮರಿತು. ನಾಯಕ ವಿರಾಟ್ ಕೊಹ್ಲಿಯ ಏಕಾಂಗಿ ಹೋರಾಟವೂ ವೃರ್ಥವಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭದಲ್ಲಿ ಕೆಎಲ್ ರಾಹುಲ್ ಶೂನ್ಯಕ್ಕೆ ಔಟಾದರು ನಂತರ ಆರಂಭಿಕ ಆಟಗಾರ ರೋಹಿತ್ ಶರ್ಮ 15ರನ್ ಗಳಿಸಿದ್ದು ಮಾರ್ಕ್ ವುಡ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್ 4ರನ್ ಗೆ ಕ್ರಿಸ್ ಜೋರ್ಡನ್ ಬೌಲಿಂಗ್‌ನಲ್ಲಿ ಔಟಾದರು. ನಾಯಕ ವಿರಾಟ್ ಕೊಹ್ಲಿ ಕೊನೆ ಹಂತದವರೆಗೂ ಭಾರತ ತಂಡಕ್ಕೆ ಬೆನ್ನೆಲುಬಾಗಿ ನಿಂತರು. 46 ಎಸೆತಗಳಲ್ಲಿ 77ರನ್ ಗಳಿಸಿದರು. 4 ಸಿಕ್ಸರ್ ಗಳು ಹಾಗೂ 8 ಬೌಂಡರಿಗಳನ್ನು ಸಿಡಿಸಿದರು ಒಟ್ಟಾರೆ ಭಾರತ ತಂಡ 6 ವಿಕೆಟ್ ನಷ್ಟಕ್ಕೆ 156ರನ್ ಗಳ ಮೊತ್ತ ದಾಖಲಿಸಿತು.

ಸ್ಪರ್ಧಾತ್ಮಕ ಮೊತ್ತ ಹಿಂಬಾಲಿಸಿದ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜೋಸ್ ಬಟ್ಲರ್(ಅಜೇಯ 83) ಹಾಗೂ ಜಾನಿ ಬೇರ್ ಸ್ಟೋ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಇಂಗ್ಲೆಂಡ್ 18.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿ, ಐದು ಪಂದ್ಯಗಳ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ.

- Advertisement -
spot_img

Latest News

error: Content is protected !!