Saturday, June 6, 2026
Homeತಾಜಾ ಸುದ್ದಿಹೆತ್ತ ತಾಯಿಯ ಕಪಾಳಕ್ಕೆ ಹೊಡೆದ ಮಗ: ಸ್ಥಳದಲ್ಲೇ ಸಾವನ್ನಪ್ಪಿದ ವೃದ್ಧೆ, ಸೋಷಿಯಲ್ ಮೀಡಿಯಾದಲ್ಲಿ ...

ಹೆತ್ತ ತಾಯಿಯ ಕಪಾಳಕ್ಕೆ ಹೊಡೆದ ಮಗ: ಸ್ಥಳದಲ್ಲೇ ಸಾವನ್ನಪ್ಪಿದ ವೃದ್ಧೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಅಮಾನವೀಯ ವೀಡಿಯೋ

- Advertisement -
- Advertisement -

ನವದೆಹಲಿ: ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು ಆದ್ರೆ ಕೆಟ್ಟ ತಾಯಿ ಇರಲಾರಳು ಅನ್ನೋ ಮಾತಿದೆ. ಆದ್ರೆ ಈ ವಿಡಿಯೋ ನೋಡಿದ್ರೆ ನಿಮಗೆ ನಿಜಕ್ಕೂ ಆ ಮಾತು ಸತ್ಯ ಅಂತಾ ಅನ್ನಿಸದೇ ಇರಲ್ಲ.

ಹೌದು… ನವದೆಹಲಿಯ ದ್ವಾರಕ ಏರಿಯಾದಲ್ಲಿ ಅಂತಹದ್ದೊಂದು ಘಟನೆ ನಡೆದಿದೆ. ತಾಯಿಯೊಂದಿಗೆ ಜಗಳವಾಡುತ್ತಿದ್ದ ಮಗನೊಬ್ಬ ಆಕೆಯ ಕಪಾಳಕ್ಕೆ ಬಾರಿಸಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಅವ್ತಾರ್ ಕೌರ್​ (76) ಸಾವಿಗೀಡಾದ ವೃದ್ಧೆ. ಸೋಮವಾರ ಮಧ್ಯಾಹ್ನ ನೆರೆಮನೆಯವರೊಂದಿಗಿನ ಪಾರ್ಕಿಂಗ್​ ಸಮಸ್ಯೆಯ ಬಗ್ಗೆ ಮಗ ಮತ್ತು ಸೊಸೆ ಜತೆ ವಾಗ್ವಾದಕ್ಕೆ ಇಳಿದಿದ್ದಾಗ ಅನಿರೀಕ್ಷಿತ ಘಟನೆ ಸಂಭವಿಸಿದೆ.

ಮಾತಿನ ಚಕಮಕಿ ನಡುವೆಯೇ ತಾಯಿಯ ಕಪಾಳಕ್ಕೆ ಮಗ ಬಾರಿಸಿದಾಗ ಆಕೆ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬೀಳುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೃದ್ಧೆಯ ಸೊಸೆ ಆಕೆಯನ್ನು ಎದ್ದೇಳಿಸಲು ಪ್ರಯತ್ನಿಸುವುದು ಸಹ ವಿಡಿಯೋದಲ್ಲಿದೆ. ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

- Advertisement -

Latest News

error: Content is protected !!