Friday, May 3, 2024
Homeತಾಜಾ ಸುದ್ದಿಕನ್ನಡದ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ: ಇನ್ಮೇಲೆ ಕನ್ನಡದಲ್ಲೂ ಮಾಡಬಹುದು ಎಂಜಿನಿಯರಿಂಗ್ ಕೋರ್ಸ್

ಕನ್ನಡದ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ: ಇನ್ಮೇಲೆ ಕನ್ನಡದಲ್ಲೂ ಮಾಡಬಹುದು ಎಂಜಿನಿಯರಿಂಗ್ ಕೋರ್ಸ್

spot_img
- Advertisement -
- Advertisement -

ನವದೆಹಲಿ : ಇದುವರೆಗೆ ಇಂಜಿನಿಯರಿಂಗ್ ಅಂದ್ರೆ ಸಾಕು, ಇಂಗ್ಲೀಷ್ ಸೇರಿದಂತೆ ಇತರ ಕೆಲ ಭಾಷೆಗಳಲ್ಲಿ ಮಾತ್ರವೇ ಕಲಿಕೆಗೆ ಅವಕಾಶ ಎನ್ನುವಂತೆ ಆಗಿತ್ತು. ಆದ್ರೇ ಇದೀಗ ಕನ್ನಡದಲ್ಲಿಯೂ ನೀವು ಇಂಜಿನಿಯರಿಂಗ್ ಕೋರ್ಸ್, ಪರೀಕ್ಷೆ ಬರೆಯಬಹುದಾಗಿದೆ. ಈ ಮೂಲಕ ಕನ್ನಡ ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ.

ಹೌದು.. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(AICTE) 2020-21ನೇ ಶೈಕ್ಷಣಿಕ ಸಾಲಿನಿಂದ ಕನ್ನಡ ಸೇರಿದಂತೆ 8 ಪ್ರಾದೇಶಿಕ ಭಾಷೆಗಳಲ್ಲಿಯೂ ಇಂಜಿನಿಯರಿಂಗ್ ಪದವಿ ವ್ಯಾಸಂಗಕ್ಕೆ ಅವಕಾಶ ನೀಡಿದೆ. ಹೀಗಾಗಿ ಇಂಜಿನಿಯರಿಂಗ್ ಕೋರ್ಸ್ ಗಳನ್ನು ಕನ್ನಡ ಭಾಷೆಯಲ್ಲಿಯೂ ಕಲಿಯೋದಕ್ಕೆ ಅವಕಾಶ ಸಿಕ್ಕಂತೆ ಆಗಿದೆ.

ಇನ್ನೂ ಕನ್ನಡ ಭಾಷೆಯಲ್ಲಿ ಇಂಜಿನಿಯರಿಂಗ್ ಕೋರ್ಸ್ ಮಾಡೋದಕ್ಕೆ ಅಷ್ಟೇ ಅಲ್ಲದೇ, ಹಿಂದಿ, ತಮಿಳು, ಮಲಯಾಳಂ, ಗುಜರಾತಿ, ಬಂಗಾಳಿ ಸೇರಿದಂತೆ 8 ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್ ವ್ಯಾಸಂಗ ಮಾಡಲು ಅವಕಾಶ ನೀಡಿದೆ. ಹೀಗಾಗಿ ಇಂಜಿನಿಯರಿಂಗ್ ವ್ಯಾಸಂಗ ಮಾಡೋದಕ್ಕೆ ಬಯಸುವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗಲಿದೆ.

- Advertisement -
spot_img

Latest News

error: Content is protected !!