Sunday, May 5, 2024
Homeಕರಾವಳಿಉಡುಪಿಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಠ ಮತ್ತು ದೇವಸ್ಥಾನಗಳಿಗೆ 6 ಕೋಟಿ 10 ಲಕ್ಷ...

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಠ ಮತ್ತು ದೇವಸ್ಥಾನಗಳಿಗೆ 6 ಕೋಟಿ 10 ಲಕ್ಷ ರೂ. ಅನುದಾನ ‌ಬಿಡುಗಡೆ

spot_img
- Advertisement -
- Advertisement -

ಬೆಂಗಳೂರು: ರಾಜ್ಯದ ವಿವಿಧ ಸಮಾಜಗಳ ಮಠ, ದೇವಸ್ಥಾನ, ಸಂಘ-ಸಂಸ್ಥೆಗಳು ಮತ್ತು ಟ್ರಸ್ಟ್ ಗಳಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಉಡುಪಿ ಪಲಿಮಾರು ಮಠದ ಕುಂಜಾರುಗಿರಿಯ ದುರ್ಗಾ ಬೆಟ್ಟದ ಪರಿಸರದಲ್ಲಿ ಮಧ್ವವನ ಅಭಿವೃದ್ಧಿಗಾಗಿ 3 ಕೋಟಿ ರೂಪಾಯಿ ಬಿಡುಗಡೆಗೊಳಿಸಲಾಗಿದೆ.

ಉಡುಪಿಯಲ್ಲಿ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ವೇದವ್ಯಾಸ ರಿಸರ್ಚ್ ಸೆಂಟರ್ ಗೆ 1 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಉಡುಪಿ ಜಿಲ್ಲೆಯ ಕುಂಜಿಬೆಟ್ಟು ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ಟೆಂಪಲ್ ಡೆವಲಪ್ಮೆಂಟ್ ಟ್ರಸ್ಟ್ ಗೆ 50 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಮಂಗಳೂರು ಕಾಟಿಪಳ್ಳ 7ನೇ ಬ್ಲಾಕ್ ನಲ್ಲಿರುವ ವಿಶ್ವನಾಥ ದೇವಸ್ಥಾನಕ್ಕೆ 1 ಕೋಟಿ ರೂಪಾಯಿ ನೀಡಲಾಗಿದೆ. ಉಡುಪಿ ಜಿಲ್ಲೆಯ ಗೀತ ಮಂದಿರದ ವಾದಿರಾಜ ಸಂಶೋಧನಾ ಪ್ರತಿಷ್ಠಾನಕ್ಕೆ 60 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಒಟ್ಟು 178 ಮಠಗಳು, 59 ದೇವಸ್ಥಾನಗಳು ಮತ್ತು 26 ಸಂಘ-ಸಂಸ್ಥೆಗಳು ಮತ್ತು ಟ್ರಸ್ಟ್ ಗಳಿಗೆ ಒಟ್ಟು 142 ಕೋಟಿ 59 ಲಕ್ಷ ರೂಪಾಯಿಗಳನ್ನು ಸಮುದಾಯ ಚಟುವಟಿಕೆಗಳು, ಅಭಿವೃದ್ಧಿ, ಜೀರ್ಣೋದ್ಧಾರ ಹಾಗೂ ಇತರ ಕಾರ್ಯಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.‌

- Advertisement -
spot_img

Latest News

error: Content is protected !!