Sunday, June 7, 2026
Homeಕರಾವಳಿಮೂಡುಬಿದಿರೆ: ಆನೆಯ ಘೀಳಿಗೆ ಹೆದರಿ ಓಡಿದ ಕಾರ್ಮಿಕ; ಕಲ್ಲು ಹಾಸಿದ ನೆಲದಲ್ಲಿ ಬಿದ್ದು ಮೃತ್ಯು!

ಮೂಡುಬಿದಿರೆ: ಆನೆಯ ಘೀಳಿಗೆ ಹೆದರಿ ಓಡಿದ ಕಾರ್ಮಿಕ; ಕಲ್ಲು ಹಾಸಿದ ನೆಲದಲ್ಲಿ ಬಿದ್ದು ಮೃತ್ಯು!

- Advertisement -
- Advertisement -

ಮೂಡುಬಿದಿರೆ : ಕೊಡ್ಯಡ್ಕ ದೇವಸ್ಥಾನದ ಹೊರ ಆವರಣದಲ್ಲಿ ಆನೆಗೆ ಆಹಾರ ವಸ್ತು ಕೊಡುವ ವೇಳೆ ಯಾವುದೋ ಸಿಟ್ಟಿನಲ್ಲಿ ಆನೆ ಘೀಳಿಟ್ಟಿದ್ದರಿಂದ ಬೆದರಿ ಓಡಿದ ದೇವಸ್ಥಾನದ ಕೂಲಿ ಕಾರ್ಮಿಕ ಕಲ್ಲು ಹಾಸಿದ ನೆಲದಲ್ಲಿ ಜಾರಿ ಬಿದ್ದು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಮೃತರನ್ನು ಕಾರ್ಕಳ ಕೈಗಾರಿಕಾ ಪ್ರಾಂಗಣದ ಬಳಿಯ ನಿವಾಸಿ ವಿಶ್ವನಾಥ ದೇವಾಡಿಗ(58) ಎಂದು ಗುರುತಿಸಲಾಗಿದೆ. ಆನೆಯ ಮಾವುತ ಹುರುಳಿ ತರಲು ಹೋಗಿದ್ದ ಸಂದರ್ಭ ದೇವಸ್ಥಾನದ ಇನ್ನೊಬ್ಬ ಕೂಲಿ ಕಾರ್ಮಿಕ ವಿಶ್ವನಾಥ ದೇವಾಡಿಗ ಆನೆಯ ಬಳಿ ಹೋಗಿದ್ದಾಗ ಯಾವುದೋ ಸಿಟ್ಟಿನಲ್ಲಿ ಆನೆ ಜೋರಾಗಿ ಘೀಳಿಟ್ಟಿತ್ತು. ಇದರಿಂದ ಹೆದರಿದ ಅವರು ಓಡುವ ಭರದಲ್ಲಿ ಕಲ್ಲು ಹಾಸಿದ ನೆಲಕ್ಕೆ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮೃತರ ಸಹೋದರಿ ಸುನಂದಾ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

- Advertisement -

Latest News

error: Content is protected !!