Thursday, June 4, 2026
Homeತಾಜಾ ಸುದ್ದಿರಾಜ್ಯದ ಜನತೆಗೆ ಪವರ್ ಶಾಕ್ : ಗೃಹ ಬಳಕೆಯ ವಿದ್ಯುತ್ ದರ ಯುನಿಟ್ ಗೆ 35...

ರಾಜ್ಯದ ಜನತೆಗೆ ಪವರ್ ಶಾಕ್ : ಗೃಹ ಬಳಕೆಯ ವಿದ್ಯುತ್ ದರ ಯುನಿಟ್ ಗೆ 35 ಪೈಸೆ ಏರಿಕೆ

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಾಗಿದೆ. ಗೃಹ ಬಳಕೆಯ ವಿದ್ಯುತ್ ದರ ಪ್ರತಿ ಯುನಿಟ್ ಗೆ 35 ಪೈಸೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಹಂಗಾಮಿ ಅಧ್ಯಕ್ಷ ಮಂಜುನಾಥ್ ಸುದ್ದಿ ಗೋಷ್ಟಿಯಲ್ಲಿ ದರ ಏರಿಕೆ ವಿಚಾರ ಪ್ರಕಟಿಸಿದ್ದಾರೆ.

ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ದರ ಏರಿಕೆಯಾಗಲಿದ್ದು, ಮೆಸ್ಕಾಂ ವ್ಯಾಪ್ತಿಯಲ್ಲಿ ಕೂಡಾ ಏಪ್ರಿಲ್ ಒಂದರಿಂದಲೇ ಪೂರ್ವಾನ್ವಯವಾಗುವಂತೆ ಹೊಸ ದರ ಜಾರಿಯಾಗಲಿದೆ.‌

ಪ್ರತಿ ಯುನಿಟ್ ಗೆ ಒಂದು ರೂಪಾಯಿ 85 ಪೈಸೆ ಏರಿಕೆ ಮಾಡುವಂತೆ ಎಸ್ಕಾಂಗಳು ಕೆಇಆರ್ ಸಿಗೆ ಪ್ರಸ್ತಾವನೆ ಸಲ್ಲಿಸಿದ್ದವು. ಅದರಂತೆ ಸಾಧಕ ಬಾಧಕ ಪರಿಶೀಲಿಸಿ ಕೆಇಆರ್ ಸಿ 35 ಪೈಸೆ ಹೆಚ್ಚಿಸಿದೆ. ಕಳೆದ ಬಾರಿ ದರ ಏರಿಕೆ ವೇಳೆ ಯುನಿಟ್ ಗೆ 30 ಪೈಸೆ ಹೆಚ್ಚಳ ಮಾಡಲಾಗಿತ್ತು.

- Advertisement -

Latest News

error: Content is protected !!